ಕೈಟ್ ಬ್ರದರ್ಸ್

Movie Review: ಸರಕಾರಿ ಶಾಲೆ ಉಳಿಸುವ ಕೈಟ್ ಬ್ರದರ್ಸ್

ಚಿತ್ರ: ಕೈಟ್ ಬ್ರದರ್ಸ್
ನಿರ್ದೇಶನ: ವೀರೇನ್ ಸಾಗರ್ ಬಗಾಡೆ
ತಾರಾ ಬಳಗ: ಪ್ರಣೀಲ್ ನಾಡಿಗೇರ್, ವಿನೋದ್ ಬಗಾಡೆ, ಸಮರ್ಥ್ ಆಶಿ,ಅಭಿಷೇಕ್, ಶ್ರೇಯ ಹರಿಹರ್ ಇತರರು
ರೇಟಿಂಗ್: 3.5

ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಬ್ಬರು ಸ್ನೇಹಿತರು ನಡೆಸುವ ಹೋರಾಟದ ಕಥೆಯನ್ನು ಒಳಗೊಂಡ ಚಿತ್ರ ಕೈಟ್ ಬ್ರದರ್ಸ್.

ಚಿತ್ರದಲ್ಲಿ ಬರುವ ಇಬ್ಬರು ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬ ಹುಡುಗ ಸರಕಾರಿ ಶಾಲೆಗೆ ಹೋಗುವ ಹನುಮ. ಇನ್ನೊಬ್ಬ ಶ್ರೀಮಂತ ಮನೆತನದ ಖಾಸಗಿ ಶಾಲೆಗೆ ಹೋಗುವ ಶ್ರೀರಾಮ. ಈ ಇಬ್ಬರು ಹುಡುಗರು ಊರಿನ ಸರ್ಕಾರಿ ಶಾಲೆ, ಮಳೆ ಬಂದು ಬಿದ್ದು ಹೋದಾಗ ಅದನ್ನು ಉಳಿಸಲು ಯಾವ ರೀತಿ ಹೋರಾಡುತ್ತಾರೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಈ ಚಿತ್ರ ಸೆನ್ಸಾರ್ ಆಗಿ ಏಳು ವರ್ಷ ಕಳೆದಿದೆ. ಆದರೆ ಇಂದಿನ ಕಾಲಘಟ್ಟಕ್ಕೆ ಕಥೆ ಪೂರಕವಾಗಿದೆ. ನಿರ್ದೇಶಕರು ಸಾಮಾಜಿಕ ಕಳಕಳಿಯ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ಜನರ ಹೋರಾಟದ ಕಥೆಯನ್ನು ತೆರೆಯ ಮುಂದೆ ಇಟ್ಟಿದ್ದಾರೆ.

ಚಿತ್ರದ ಕಲಾವಿದರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಾಹಕ ಅಶೋಕ್ ಕಶ್ಯಪ್ ಚಿತ್ರವನ್ನು ಸುಂದರವಾಗಿ ಮೂಡಿ ಬರುವಂತೆ ಮಾಡಿದ್ದಾರೆ.

ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಒಂದು ಬಾರಿ ನೋಡಿ ಪ್ರೋತ್ಸಾಹ ಮಾಡಿದರೆ ತಪ್ಪಾಗಲಾರದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!