ಬೆಟ್ಟೇಗೌಡ V/S ಚಿಕ್ಕಬೋರಮ್ಮ ಹಾಡಿಗೆ ಪವರ್ ಸ್ಟಾರ್ ದನಿ..!

ಮಿಸ್ಟರ್ ಐರಾವತ ಚಿತ್ರದ ನಂತರ ಎ ಪಿ ಅರ್ಜುನ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಕಿಸ್. ಈ ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಟಿಸಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕಿಸ್ ನ ಶೀಲಾ ಸುಶೀಲಾ..' ಹಾಗೂನೀನೆ ಮೊದಲು ನೀನೆ ಕೊನೆ..’ ಹಾಡುಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಈಗ ಬೆಟ್ಟೇಗೌಡ v/s ಚಿಕ್ಕಬೋರಮ್ಮ ಎಂಬ ಹಾಡು ರಿಲೀಸ್ ಆಗಿದೆ.

ವಿಶೇಷವೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಜೊತೆಗೆ ಅವರೇ ಹಾಡನ್ನು ಅನಾವರಣಗೊಳಿಸಿದ್ದಾರೆ. `ಕಿಸ್’ ಚಿತ್ರಕ್ಕೆ ತುಂಟ ತುಟಿಗಳ ಆಟೋಗ್ರಾಫ್ ಎನ್ನುವ ಅಡಿ ಬರಹ ಇದೆ. ವಿ ಹರಿಕೃಷ್ಣ ಅವರ ಸಂಗೀತ, ಗಿರೀಶ್ ಗೌಡ ಅವರ ಛಾಯಾಗ್ರಹಣ, ಡಾ ಕೆ ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಅವರ ಸಂಕಲನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!