ಎಲ್ಲವನ್ನೂ ನೇರವಾಗಿ, ಸ್ಪಷ್ಟವಾಗಿ ಹೇಳುವ ಹಿರಿಯ ನಟ ಕಿಶೋರ್ ಅವರು ಕೆಜಿಎಫ್ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ.
ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನಾನು ಇಷ್ಟಪಡೋ ರೀತಿಯ ಸಿನಿಮಾ ಅಲ್ಲ ಇದು. ಇದು ನನ್ನ ವೈಯಕ್ತಿಕ ಆಯ್ಕೆ ವಿಚಾರ ಎಂದು ಕಿಶೋರ್ ಹೇಳಿದ್ದಾರೆ.
ಕಿಶೋರ್ ಅವರು ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
___

Be the first to comment