kishore ಜನ ಸಾಹಿತ್ಯ ಸಮ್ಮೇಳನಕ್ಕೆ ಕಿಶೋರ್ ಬೆಂಬಲ

ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂಡಾಯವಾಗಿ ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಸಾಹಿತ್ಯ ಸಮ್ಮೇಳನಕ್ಕೆ ನಟ ಕಿಶೋರ್ ಬೆಂಬಲ ಸೂಚಿಸಿದ್ದಾರೆ.

ಜನಸಾಹಿತ್ಯ ಸಮ್ಮೇಳನದ ಪರವಾಗಿ ಹಾಗೂ ಸರ್ಕಾರದ ನೆರಳಲ್ಲಿ ನಡೆಯುವ ಪರಿಷತ್ತಿನ ಸಮ್ಮೇಳನದ ವಿರುದ್ಧ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿರುವ ಕಿಶೋರ್, ”ಆಳುವ ಅರೆಮನೆಗೆ ಸೀಮಿತವಾಗಿದ್ದ ಸಾಹಿತ್ಯ, 12ನೇ ಶತಮಾನದ ವಚನಕಾರರ ಬಂಡಾಯದಿಂದ ಜನಸಾಹಿತ್ಯ ಕ್ರಾಂತಿಯಾದ ಹಾಗೆ ಒಡೆದಾಳುವ ನಿರಂಕುಶ ಧರ್ಮಾಂಧ ರಾಜಕಾರಣದ ಸಂಕೋಲೆಯಿಂದ ಮುಕ್ತವಾಗಿ, ಕನ್ನಡ ನಾಡಿನ ಅಸ್ಮಿತೆಯ, ಸಾಂಸ್ಕೃತಿಕ ಜೀವಂತಿಕೆಯ, ಸೃಜನಶೀಲ ಜೀವಶಕ್ತಿಯ, ಜೀವ ಪ್ರೀತಿಯ ಸಂಕೇತವಾಗಿ, ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂಬ ಹಾರೈಕೆ” ಎಂದಿದ್ದಾರೆ.

ಜನ ಸಾಹಿತ್ಯ ಸಮ್ಮೇಳನವು ಜನವರಿ 08 ರಂದು ಬೆಳಿಗ್ಗೆ 10 ಗಂಟೆಯಿಂದ ಕೆ.ಆರ್.ಸರ್ಕಲ್, ಗಾಂಧಿ ನಗರದ ಅಲುಮ್ನಿ ಹಾಲ್‌ನಲ್ಲಿ ನಡೆಯಲಿದೆ.

ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮುಸ್ಲಿಂ ಲೇಖಕರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಎತ್ತಿದ ತಕರಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿಯವರು ಸೂಕ್ತವಾಗಿ ಪ್ರತಿಕ್ರಿಯಿಸದ ಕಾರಣ ಸಾಹಿತ್ಯ ಸಮ್ಮೇಳನಕ್ಕೆ ಬಂಡಾಯ ಆಗಿ ಜನ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!