ಹರ್ಷಿಕಾ ಪೂಣಚ್ಚ ಚೊಚ್ಚಲ ನಿರ್ದೇಶನದ ಚಿ. ಸೌಜನ್ಯ ಚಿತ್ರದಲ್ಲಿ ಕಿಶೋರ್ ನಟಿಸುತ್ತಿದ್ದಾರೆ.
“ಶೀರ್ಷಿಕೆ ಸಾಕಷ್ಟು ಅರ್ಥಪೂರ್ಣವಾಗಿದೆ. ನಾವು ಅದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೆಸರು ಮತ್ತು ಕಥೆ ಎರಡಕ್ಕೂ ಚಿತ್ರತಂಡ ನ್ಯಾಯ ಸಲ್ಲಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಕಿಶೋರ್ ಹೇಳಿದ್ದಾರೆ.
ಈ ಹಿಂದೆ ನಿರ್ದೇಶಕಿ ಸುಮನಾ ಕಿತ್ತೂರ್ ಅವರೊಂದಿಗೆ ಕೆಲಸ ಮಾಡಿದ ಕಿಶೋರ್ , ಪುರುಷ ನಟರಲ್ಲಿ ಸಾಮಾನ್ಯವಾಗಿ ‘ಈಗೋ’ ಇರುತ್ತದೆ. ಆದರೆ ಸೃಜನಾತ್ಮಕ ಕೆಲಸದಲ್ಲಿ ಲಿಂಗವು ಅಪ್ರಸ್ತುತ ಎಂದು ನಾನು ಭಾವಿಸುತ್ತೇನೆ. ಮಹಿಳಾ ನಿರ್ದೇಶಕಿ ಕೂಡಾ ಪುರುಷನಂತೆಯೇ ಸಮರ್ಥಳು. ಅವರ ದೃಷ್ಟಿಕೋನ ವಿಭಿನ್ನವಾಗಿರಬಹುದು. ಆದರೆ ಅವರ ಕಥೆ ಹೇಳುವಿಕೆ ಅನನ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
‘ಆಚಾರ್ & ಕೋ’ ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ಅವರ ಮುಂದಿನ ಚಿತ್ರದಲ್ಲಿ ಕಿಶೋರ್ ನಟಿಸಲಿದ್ದಾರೆ. ಮೇ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.
”ಸಿಂಧು ಅವರು ಗಂಭೀರ ಚಿಂತನೆಯ, ಸೂಕ್ಷ್ಮ ಸಂವೇದನೆಯ ವಿಷಯದೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. 13 ದಿನಗಳಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಸಾವು, ಅಂತ್ಯಸಂಸ್ಕಾರ ಮತ್ತು ಅನುಸರಿಸುವ ಆಚರಣೆಗಳ ವಿಷಯದ ಸುತ್ತ ಸಾಗುತ್ತದೆ. ಇದೊಂದು ವಿಶಿಷ್ಟ ನಿರೂಪಣೆಯಾಗಿದೆ. ಚಿತ್ರ ಪ್ರಿ-ಪ್ರೊಡಕ್ಷನ್‌ನಲ್ಲಿದ್ದು, ಚಿತ್ರ ತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ” ಎಂದು ಅವರು ಹೇಳಿದ್ದಾರೆ.
—-

Be the first to comment