ಕನ್ನಡದ ಖ್ಯಾತ ನಟ ಕಿಶೋರ್ ಅವರು ‘ಸಿಕಂದರ್’ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಕಿಶೋರ್ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ‘ಸಿಕಂದರ್’ ಈದ್‌ಗೆ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ಪಾತ್ರದಲ್ಲಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಇದು ಒಂದು ಸಣ್ಣ ಪಾತ್ರ. ನನಗೆ ಸಲ್ಮಾನ್ ಖಾನ್ ಹಾಗೂ ಸತ್ಯರಾಜ್ ಅವರೊಂದಿಗೆ ಪರದೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಇಷ್ಟು ದೊಡ್ಡ ಕ್ಯಾನ್ವಾಸ್‌ನಲ್ಲಿ ಕೆಲಸ ಮಾಡುವುದು ಒಂದು ಒಳ್ಳೆಯ ಅನುಭವವಾಗಿತ್ತು” ಎಂದು ಕಿಶೋರ್ ಹೇಳಿದ್ದಾರೆ.
”ಸೆಟ್‌ನಲ್ಲಿ ತುಂಬಾ ಜನರಿದ್ದರೂ ಸಲ್ಮಾನ್ ಖಾನ್ ಪ್ರತಿದಿನ ಎಲ್ಲರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡುತ್ತಾರೆ. ಈ ಚಿತ್ರದಲ್ಲಿ ಕರ್ನಾಟಕದ ಕೆಲವು ಜನ ಕೆಲಸ ಮಾಡುತ್ತಿದ್ದಾರೆ. ಇದು ಸೆಟ್ ನಲ್ಲಿ ನನಗೆ ಮತ್ತಷ್ಟು ಆರಾಮದಾಯಕವೆನಿಸಿತು. ನನಗೆ ಕಿರಿಕ್ ಪಾರ್ಟಿಯ ರಶ್ಮಿಕಾ ಪರಿಚಯವಿತ್ತು. ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ” ಎಂದು ಕಿಶೋರ್ ನೆನಪಿಸಿಕೊಳ್ಳುತ್ತಾರೆ.
“ನಾನು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಅದು ಪೋಸ್ಟ್-ಪ್ರೊಡಕ್ಷನ್‌ನಲ್ಲಿದೆ. ನನ್ನ ಬಳಿ ರೆಡ್ ಕಾಲರ್ ಎಂಬ ಇನ್ನೊಂದು ಸಿನಿಮಾ ಇದೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿರುವ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮತ್ತು ಸತ್ಯರಾಜ್ ಖಳನಾಯಕನಾಗಿ ನಟಿಸಿದ್ದಾರೆ.
—–

Be the first to comment