ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರದ ಶೀರ್ಷಿಕೆ ಅನಾವರಣ ಆಗಿದ್ದು ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ.
ಈಗಾಗ್ಲೆ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಗಮನ ಸೆಳೆದಿದ್ದ ಕಿರೀಟಿ ಸಿನಿಮಾದ ಟೈಟಲ್ ಏನು ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು. ಸಾಕಷ್ಟು ಸಸ್ಪೆನ್ಸ್ ಆಗಿದ್ದ ಸಿನಿಮಾದ ಟೈಟಲ್ ಕಿರೀಟಿ ಹುಟ್ಟುಹಬ್ಬದ ಪ್ರಯುಕ್ತ ರಿವೀಲ್ ಆಗಿದೆ.
ಏಕಕಾಲದಲ್ಲಿ ‘ಜೂನಿಯರ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಟೈಟಲ್ ರಿವೀಲ್ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.
‘ಮಾಯಾಬಜಾರ್’ ಸಿನಿಮಾ ನಿರ್ದೇಶನ ಮಾಡಿ ರಾಧಾಕೃಷ್ಣ ರೆಡ್ಡಿ ಗಮನ ಸೆಳೆದಿದ್ದರು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮ್ ಪ್ರೊಡಕ್ಷನ್’ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ದೊಡ್ಡ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಜೆನಿಲಿಯಾ, ಶ್ರೀಲೀಲಾ ಸೇರಿದಂತೆ ಸಾಕಷ್ಟು ಮಂದಿ ಜೂನಿಯರ್ ತಂಡದಲ್ಲಿದ್ದಾರೆ.
__

Be the first to comment