ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಮಹದಾಸೆಯೊಂದಿಗೆ ಹಲವಾರು ಯುವ ಪ್ರತಿಭೆಗಳು ಬರುತ್ತಿದ್ದಾರೆ. ಅದೇ ಹುಮ್ಮಸ್ಸಿನಿಂದ ಯುವ ಪ್ರತಿಭೆಗಳು ಕಾರ್ತಿಕ್ ಸ್ಟುಡಿಯೋದಲ್ಲಿ ಕಿರಿಕ್ ಕೃಷ್ಣ ಚಿತ್ರದ ಆರಂಭದ ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆಯನ್ನು ಪಡೆದುಕೊಂಡಿದೆ.
ಹಳ್ಳಿಯರಲ್ಲಿದ್ದ ಹಳ್ಳಿಯಲ್ಲಿರುವ ಒಬ್ಬ ಮುಗ್ಧ ಯುವಕ ಮುಖ್ಯಸ್ಥರ ಕೈಯಲ್ಲಿ ಸಿಕ್ಕಿ ಹೇಗೆ ನರಳುತ್ತಾನೆ.ಜೀವನವೇ ಕುಗ್ಗಿ ಹೋಗುವ ಪರಿಸ್ಥಿತಿಯಲ್ಲಿ ಮತ್ತೆ ಅವನು ಹೇಗೆ ಕಷ್ಟಗಳನ್ನು ಎದುರಿಸಿ ನಿಲ್ಲುತ್ತಾನೆ , ತನ್ನ ಸಾಮರ್ಥ್ಯ ಏನು ಎಂಬುದನ್ನು ಹೇಗೆ ತೋರಿಸುತ್ತಾನೆ ಎಂಬ ಕಥಾ ಹಂದರ ಈ ಚಿತ್ರದಲ್ಲಿ ಪ್ರಮುಖ ಕಥಾ ಎಳೆಯಾಗಿದೆ.
ಹಾಗೆಯೇ ಈ ಚಿತ್ರದ ಮೊದಲ ಭಾಗದಲ್ಲಿ ಒಬ್ಬ ನಾಯಕಿ ಹಾಗೂ ದ್ವಿತೀಯ ಭಾಗದಲ್ಲಿ ಮತ್ತೊಬ್ಬ ನಾಯಕಿ ಬರುವ ಮೂಲಕ ನಾಯಕನ ಜೀವನದ ಪ್ರೇಮ ಹಾಗೂ ಏರು ಪೇರುಗಳ ಸಂಗಮಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಯುವ ನಟ ಕೃಷ್ಣ ನಟರಾಗಿ ಭಾನುಶ್ರೀ , ಶೈಲು ನಾಯಕಿಯರಾಗಿ ಹಾಗೂ ಜ್ಯೋತಿ ಮುರೂರ್ , ಶೋಭ್ ರಾಜ್ , ರಂಗಾಯಣ ರಘು , ಕಲ್ಯಾಣಿ , ತಬಲಾ ನಾಣಿ , ಮೂಗ್ ಸುರೇಶ್ , ಮೈಕೋ ನಾಗರಾಜ್ ಹಾಗೂ ಕಲ್ಯಾಣಿ ರಾಜು ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಶ್ರೀ ಕೃಷ್ಣ ಕಂಬೈನ್ಸ್ ಮೂಲಕ ಶೋಭ್ರಾಜ್ ಥ ಇಡೀ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಕಾರ್ತಿಕ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. 3 ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಹಾಗೂ ಸಾಹಿತ್ಯ ನೀಡುತ್ತಿದ್ದಾರೆ.
ಈ ಕಿರಿಕ್ ಕೃಷ್ಣ ಚಿತ್ರಕ್ಕೆ ಜಾನಿ ಮಾಸ್ಟರ್ 4 ಸಾಹಸ ಸನ್ನಿವೇಶಗಳನ್ನ ಚಿತ್ರೀಕರಿಸಲಿದ್ದಾರೆ. ಛಾಯಾಗ್ರಹಣವನ್ನು ದೀಪು
ನಿರ್ವಹಿಸುತ್ತಿದ್ದು , ಕುಮಾರ್ ಹಾಗೂ ಜಯರಾಮಯ್ಯ ಸಂಕಲನವನ್ನು ಮಾಡುತ್ತಿದ್ದಾರೆ.
ಒಂದು ಉತ್ತಮ ಚಿತ್ರವನ್ನು ನಿರ್ಮಿಸುವ ಉದ್ದೇಶದಿಂದ ಮುನಿರಾಜು ಹಾಗೂ ಆನೇಕಲ್ ಗೌತಮ್ ಈ ಕಿರಿಕ್ ಕೃಷ್ಣ ಚಿತ್ರವನ್ನು ನಿರ್ಮಿಸುತ್ತಿದ್ದು , ಸದ್ಯ ತಂಡ ಚಿತ್ರೀಕರಣಕ್ಕೆ ಹೊರಡಲು ಸನ್ನದ್ಧವಾಗಿದೆ.
Pingback: binance site
Pingback: life size sex doll for sale
Pingback: 메이저놀이터