Bharjari Gandu: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಭರ್ಜರಿ ಗಂಡು’ ಡಬ್ಬಿಂಗ್ ರೈಟ್ಸ್

ಬೆಂಗಳೂರು: ಕಲೆ, ಸಂಸ್ಕೃತಿಯ ತವರಾಗಿರುವ ಮೈಸೂರು ಕನ್ನಡ ಚಿತ್ರರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಾಕಷ್ಟು ಅದ್ಭುತ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಸ್ಯಾಂಡಲ್‍ವುಡ್‍ನಲ್ಲಿ ಹೆಸರು ಮಾಡುತ್ತಿರುವ ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಕೂಡ ಮೈಸೂರಿನವರೇ ಎಂಬುದು ವಿಶೇಷ.

ಬಳಗವಿದೆ. ತಮ್ಮ ನಟನೆಯಿಂದಲೇ  ಕರ್ನಾಟಕದ ತುಂಬಾ ಮನೆ ಮಾತಾಗಿರುವವರು ಕಿರಣ್ ರಾಜ್ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಕಿರಣ್ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿರುವ ‘ಬಡ್ಡೀಸ್’, ‘ಭರ್ಜರಿ ಗಂಡು’ ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿದೆ.

ಭರ್ಜರಿ ಗಂಡು’ ಚಿತ್ರದ ಟೀಸರ್ ಬಿಡುಗಡೆಯಾಗಿ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಟೀಸರ್ ಬಿಡುಗಡೆಯಾದ ಬಳಿಕ ಈ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಚಿತ್ರದ ಹಿಂದಿ ರೈಟ್ಸ್‌ ಬಿಡುಗಡೆಗೂ ಮುಂಚೆಯೇ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ‘ಬಡ್ಡೀಸ್’ ಚಿತ್ರದ ಫಸ್ಟ್‍ಲುಕ್ ಕಳೆದ ವಾರ ಬಿಡುಗಡೆಯಾಗಿದ್ದು, ವಿಭಿನ್ನ ಪೋಸ್ಟರ್‍ನಿಂದಲೇ ಸಿನಿ ಪ್ರಿಯರ ಮನ ಗೆದ್ದಿದೆ.

ಟೀಸರ್, ಪೊಸ್ಟರ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ನಟನಿಗಾಗಿ ಈಗಾಗಲೇ ರಾಜ್ಯಾದ್ಯಂತ ಅಭಿಮಾನಿಗಳ ಸಂಘ ಕೂಡ ತೆರೆದಿದ್ದಾರೆ. ಕಿರಣ್ ರಾಜ್  ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದಾರಂತೆ. ಕೇವಲ ನಟನೆಗಷ್ಟೇ ಸೀಮಿತವಾಗದ ಕಿರಣ್ ರಾಜ್ ಸಮಾಜಮುಖಿ ಕೂಡ. ಕೋವಿಡ್ ಸಾಂಕ್ರಾಮಿಕದ ವೇಳೆ ಇವರು ಮಾಡಿದ ಸಮಾಜ ಕಾರ್ಯಗಳು ಅಷ್ಟಿಷ್ಟಲ್ಲ.

ಸಮಾಜದಿಂದ ದೂರವೇ ಉಳಿದಿರುವ ತೃತೀಯ ಲಿಂಗಿಗಳಿಗೂ ಕಿರಣ್ ರಾಜ್  ನೆರವಾಗಿದ್ದಾರೆ. ಇವರ ಸಹಾಯ ನೆನೆದು ಅವರು ಆನಂದಭಾಷ್ಪವನ್ನೇ ಸುರಿಸಿದ್ದಾರೆ. ಉತ್ತಮ ನಟನೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಜನಾನುರಾಗಿಯಾಗಿರುವ ಕಿರಣ್ ರಾಜ್ ಅವರ ಸಿನಿಭವಿಷ್ಯ ಉಜ್ವಲವಾಗಿರಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!