ಸಿನಿಮಾ ನಿರ್ದೇಶಕ ನಂದಕಿಶೋರ್‌ಗೆ ಸಾಲ ನೀಡಿದ್ದ ಉದ್ಯಮಿ ಮನೋಜ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಬೇಕರಿ ರಘುವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದಸಿಸಿಬಿ ಪೊಲೀಸರು ಪರಾರಿಯಾಗಿದ್ದ ಬೇಕರಿ ರಘುವನ್ನು ಕೊನೆಗೂ ಮಂಡ್ಯ ಬಳಿ ಮಂಗಳವಾರ ರಾತ್ರಿ ಸೆರೆ ಹಿಡಿದಿದ್ದಾರೆ.
ನಂದಕಿಶೋರ್‌ಗೆ ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಮೂಲಕ ಸಾಲ ನೀಡಿದ್ದ ಮನೋಜ್ ನನ್ನು ಅಪಹರಿಸಲಾಗಿತ್ತು. ಈ ಅಪಹರಣಕ್ಕೆ ಬೇಕರಿ ರಘು ಅಣ್ಣ ಶ್ರೀನಿವಾಸ್ ಮತ್ತು ಅವನ ತಂಡ ಪೂರ್ಣ ಪ್ಲ್ಯಾನ್ ಮಾಡಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಬೇಕರಿ ರಘು ಪಾತ್ರವೂ ಸ್ಪಷ್ಟವಾದ ಕಾರಣ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು.
ಮನೋಜ್‌ನಿಂದ ರಾಜೇಶ್ ಅಲಿಯಾಸ್ ಅಪ್ಪಿ 1.2 ಲಕ್ಷ ರೂ. ಮೊತ್ತವನ್ನು ನಂದಕಿಶೋರ್‌ಗೆ ಸಾಲವಾಗಿ ಕೊಡಿಸಿದ್ದ. ಹಣ ವಾಪಸ್ ಆಗಲು ತಡವಾದಾಗ ಮನೋಜ್ ಮತ್ತು ರಾಜೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು. ರೌಡಿ ಶ್ರೀನಿವಾಸ್, ಲೋಕಿ , ಸೋಮ ಸೇರಿದ ಗ್ಯಾಂಗ್ ಮನೋಜ್ ಮೇಲೆ ಕಣ್ಣೀಟ್ಟು ನೆಲಮಂಗಲದ ಬಳಿ ಕರೆದೊಯ್ದು ಹಲ್ಲೆ ಮಾಡಿ, ಹಣ ಕಿತ್ತು ನಂತರ ಬಿಟ್ಟು ಹೋಗಿದ್ದರು.
ಇಂದು ರೌಡಿಶೀಟರ್ ಬೇಕರಿ ರಘುವನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
—-





Be the first to comment