ಸ್ಯಾಂಡಲ್ವುಡ್ನ ಬಾದ್ಶಾ ಕಿಚ್ಚ ಸುದೀಪ್ ಸದ್ದಿಲ್ಲದೆ ಒಂದಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರ್ತಾರೆ. ಈಗಾಗಲೇ ಕಿಚ್ಚ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಡ್ರೈವರ್ ಕುಟುಂಬಕ್ಕೆ ನೆರವು ನೀಡಿದ್ರು ಕಿಚ್ಚ. ಅಷ್ಟೇಅಲ್ಲ ಬಡ ಬಾಲಕಿಯ ಓದಿನ ಸಂಪೂರ್ಣ ಖರ್ಚನ್ನು ಕೂಡ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಭರಿಸಿತ್ತು.
ಅಷ್ಟೇ ಅಲ್ಲಾ ಹುಚ್ಚ ವೆಂಕಟ್ರ ಪರಿಸ್ಥಿತಿ ನೋಡಲಾಗದೇ ಅವ್ರ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿತ್ತು ಕಿಚ್ಚ ಚಾರಿಟೇಬಲ್ ಟ್ರಸ್ಟ್. ಕೆಲದಿನಗಳ ಹಿಂದೆ ಸರ್ಕಾರ ಶಾಲೆಯ 500 ಮಕ್ಕಳಿಗೆ ಶೂ ಮತ್ತು ಯೂನಿಫಾರಂ ವಿತರಣೆ ಕೂಡ ಕಿಚ್ಚನ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಆಗಿತ್ತು.
ಇದೀಗ ಕಿಚ್ಚ ಸುದೀಪ್ 4 ಸರ್ಕಾರಿ ಶಾಲೆಗಳನ್ನ ದತ್ತು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಒಬನಹಳ್ಳಿ, ಬಗ್ಗನಡು ಹಳ್ಳಿ, ಪರುಶರಾಂಪುರ, ಮತ್ತು ಚಿತ್ರನಾಯಕನ ಹಳ್ಳಿಯ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ವಹಿಸಿಕೊಂಡಿದ್ದಾರೆ. ಶಾಲೆಯ ಮೂಲ ಸೌಕರ್ಯ, ಪೀಠೋಪಕರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ,ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ. ಜೊತೆಗೆ ಅನೇಕ ಯೋಜನೆಗಳನ್ನು ಕೂಡ ಟ್ರಸ್ಟ್ ಹಮ್ಮಿಕೊಂಡಿದೆ.
ಈ ತಾಲೂಕ್ಕುಗಳ ಬಿಇಓಗಳ ಸಮ್ಮುಖದಲ್ಲಿ ಶಾಲೆಗಳನ್ನ ದತ್ತುಪಡೆಯಲಾಗಿದೆ. ಸರ್ಕಾರಿ ಶಾಲೆಗಳನ್ನ ಡಿಜಿಟಲೀಕರಣ ಮಾಡುವುದು ಕಿಚ್ಚ ಸುದೀಪ್ರ ಮುಖ್ಯ ಗುರಿಯಾಗಿದ್ದು, ಈ ಶಾಲೆಗಳಿಗೆ ಅಗತ್ಯವಿರುವ ಕಂಪ್ಯೂಟರ್ಗಳನ್ನ ನೀಡಲು ಮಾತುಕತೆ ನಡೆಸಲಾಗಿದೆ. ಶಾಲೆಗಳು ತೆರೆಯುತ್ತಿದ್ದಂತೆ. ಶಾಲಾ ಪರ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಕೆಲಸಗಳು ಆರಂಭವಾಗಲಿವೆ.
Pingback: web