ಭಾರತ ಚಿತ್ರರಂಗದ ಟಾಪ್ ನಟಿಯಾಗಿ 80, 90ರ ದಶಕದಲ್ಲಿ ಗುರುತಿಸಿಕೊಂಡಿದ್ದ ನಟಿ ಖುಷ್ಬೂ ಈಗ ತೂಕ ಕಳೆದುಕೊಂಡು 20ರ ಹರೆಯದ ಹುಡುಗಿಯ ಹಾಗೆ ಕಾಣುತ್ತಿದ್ದಾರೆ.
ಮೂಲತಃ ಮುಂಬೈಯವರಾದ ಖುಷ್ಬೂ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ಸಸ್ ಮತ್ತು ಜನಪ್ರಿಯತೆ ಸಿಕ್ಕಿತು. ಡ್ರೀಮ್ ಗರ್ಲ್ ಆಗಿದ್ದ ಖುಷ್ಬೂ ಮದುವೆ ನಂತರ ದಪ್ಪವಾದರು. ಆದರೆ ಈಗ ತೂಕ ಕಳೆದುಕೊಂಡಿರುವ ನಟಿ ಖುಷ್ಬೂ ಬಳುಕುವ ಬಳ್ಳಿಯಂತೆ ಕಾಣಿಸುವ ಮೂಲಕ ನಾಯಕಿಯರೂ ಅಸೂಹೆ ಪಡುವಂತೆ ಮಾಡಿದ್ದಾರೆ.
ಖುಷ್ಬೂ ದಕ್ಷಿಣ ಭಾರತ ಚಿತ್ರರಂಗಕ್ಕೆ ತಮಿಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ರವಿಚಂದ್ರನ್ ನಟಿಸಿದ ರಣಧೀರ ಸಿನಿಮಾ ಮೂಲಕ ಖುಷ್ಬೂ ಅವರ ಮೊದಲ ಕನ್ನಡ ಚಿತ್ರ ಆಗಿತ್ತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ನಟಿಯಾದ ಖುಷ್ಬೂ ಸ್ಟಾರ್ ನಟರಿಗೆ ಸಿಗುತ್ತಿದ್ದಷ್ಟೇ ಸಂಭಾವನೆ ಪಡೆಯುತ್ತಿದ್ದರು.
ತಮಿಳು ನಿರ್ದೇಶಕ ಸುಂದರ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖುಷ್ಬೂ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆ ಬಳಿಕ ಖುಷ್ಬೂ ತೂಕ ಹೆಚ್ಚಾಯಿತು. ಆದರೆ ಲಾಕ್ ಡೌನ್ ಸಮಯದ ಸದುಪಯೋಗ ಮಾಡಿಕೊಂಡ ಅವರು ಈಗ ಸ್ಲಿಮ್ ಆಗಿ 20ರ ಹರೆಯದ ಹುಡುಗಿಯರಿಗೆ ಕಾಂಪಿಟೇಶನ್ ಕೊಡುವ ಹಾಗೆ ಆಗಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯ ಮಾತಾಡುತ್ತಿದ್ದಾರೆ.
Be the first to comment