‘ಖನನ’ ಇದು ರಿಯಲ್ ಕಥೆಯ ರೀಲ್ ಸ್ಟೋರಿ

ಚಂದನವನದಲ್ಲಿ ಈಗಂತೂ ಸಾಕಾಷ್ಟು ಸಿನಿಮಾಗಳು ತೆರೆಕಾಣ್ತಾ ಸಿನಿರಸಿಕರ ಮನೋರಂಜನೆಯ ಬುತ್ತಿಯನ್ನ ಇನ್ನಷ್ಟು ಹೆಚ್ಚಿಸಿವೆ.ಇತ್ತಿಚೆಗೆ ಕನ್ನಡ ಸಿನಿಮಾರಂಗದಲ್ಲಿ ಆ್ಯಕ್ಷನ್, ಸಸ್ಪೆನ್ಸ್,ಕಾಮಿಡಿ,ರೊಮ್ಯಾಂಟಿಕ್ ಸಿನಿಮಾಗಳು ಸದ್ದನ್ನ ಮಾಡ್ತಾ ಇವೆ. ಇವುಗಳ ನಡುವೇಯೆ ಹಾರರ್ ಸಿನಿಮಾವೊಂದು ತೆರೆಗೆ ಬರಲು ರೆಡಿ ಆಗಿದೆ.ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ಹಾಗೂ ಅಪ್ರತಿಮ ಪ್ರತಿಭಾವಂತರಿಗೆ ಮೊದಲ ವೇದಿಕೆ ಅನ್ನೋದು ಗೊತ್ತಿರೋ ವಿಚಾರ.ಅನಾದಿ ಕಾಲದಿಂದಲೂ ಹಾಗೇ ಹಲವಾರೂ ದೊಡ್ಡ ಸಿನಿಮಾ ಸಾಧಕರಿಗೆ ಮೊದಲ ವೇದಿಕೆಯಾದ ಇತಿಹಾಸ ಈ ಕನ್ನಡ ಚಿತ್ರರಂಗಕ್ಕಿದೆ. ಈ ಇತಿಹಾಸಕ್ಕೆ ಮತ್ತೊಂದು ತಂಡ ಸೇರ್ಪಡೆಯಾಗೋ ಸನೀಹದಲ್ಲಿದೆ. ಅದೇ ಹೊಸಬರ ಖನನ ಸಿನಿಮಾ ತಂಡ.

ಸದ್ಯದ ಚಿತ್ರರಂಗದ ಹದಕ್ಕೆ ಅನುಗುಣವಾಗಿ ‘ಖನನ’ ಹೆಸರಿನ ಚಿತ್ರವೊಂದು ಸದ್ದಿಲ್ಲದೇ ಗಾಂಧಿನಗರದಲ್ಲಿ ಸಿದ್ಧಗೊಂಡಿದೆ.ಅರೆ ಖನನ ? ಇದೇನಿದು ಕೇಳೋಕೆ ಢಿಫರೆಂಟ್ ಅನಸ್ತಾ ಇದ್ಯಲ್ಲಾ ಅಂತ ಥಿಂಕ್ ಮಾಡ್ತಾ ಇದೀರಾ? ಅಷ್ಟಕ್ಕೂ ‘ಖನನ’ ಎಂಬುದು ಸಂಸ್ಕೃತ ಭಾಷೆಯ ಪದ. ಅಚ್ಚ ಕನ್ನಡದಲ್ಲಿ ‘ಖನನ’ ಎಂದರೆ ಅಗೆಯುವುದು ಅಥವಾ ಹೂಳುವುದು ಎಂದರ್ಥ ಕೊಟ್ರೆ ಇದೀಗ ಇದೇ ಹೆಸರಿನಲ್ಲೊಂದು ‘ಸಿನಿಮಾ ಬರ್ತಿದ್ದು ಟೈಟಲ್ ನಿಂದಲೇ ಕೂತೂಹಲವನ್ನ ಜಾಸ್ತಿ ಮಾಡಿದೆ.
ಎಸ್.ನಲಿಗೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ವಣವಾಗಿರುವ ಈ ‘ಖನನ’ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಬ್ದಾರಿ ಹೊತ್ತವರು ಕೂಡ ಹೊಸ ಪ್ರತಿಭೆ ರಾಧಾ. ‘ಖನನ’ ಚಿತ್ರ ರಾಧಾ ಅವರ ಮೊದಲ ನಿರ್ದೇಶನದ ಚಿತ್ರವಾದರೂ ಈ ಹಿಂದೆ ಹಲವು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆಯಂತೆ.
ಸಾಮಾನ್ಯ ಜನರ ಜೀವನದಲ್ಲಿ ನಡೆಯುವ ಸನ್ನಿವೇಶಗಳೇ ಇಲ್ಲಿರಲಿದ್ದು,ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆಯಂತೆ.ಕೆಲವು ವರ್ಷಗಳ ಹಿಂದೆ ನಿರ್ದೇಶಕಿಯ ಜೀವನದಲ್ಲಿ ನಡೆದ ನೈಜ ಕಥೆಯ ಎಳೆಯನ್ನ ಇಟ್ಕೊಂಡು ಹೆಣೆಯಲಾದ ಕಥೆಗೆ ‘ಹೊಸತನ ಮತ್ತು ಹೊಸ ನಿರೂಪಣೆ ಯ ಶೈಲಿಯಲ್ಲಿ ಈಗಿನ ಟ್ರೆಂಡ್ ಗೆ ತಕ್ಕಂತೆ ಹೇಳಲಾಗಿದೆ ಅನ್ನೋದು ಆ್ಯಕ್ಷನ್ ಕಟ್ ಹೇಳಿರೋ ರಾಧಾ ಅವರ ಮಾತು.
ಸಸ್ಪೆನ್ಸ್ ಹಾರರ್ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಿ.ಶ್ರೀನಿವಾಸ್ ರಾವ್ ಬಂಡವಾಳ ಹೂಡುವುದರ ಜೊತೆಗೆ ಅವರ ಮಗ ಆರ್ಯವರ್ಧನ್ ರನ್ನ ನಾಯಕ ನಟನಾಗಿ ಚಂದನವನಕ್ಕೆ ಪರಿಚಯಿಸ್ತಾ ಇದಾರೆ.ಇವರಿಗೆ ನಾಯಕಿಯಾಗಿ ಕರಿಷ್ಮಾ ಬರುಹ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ಕೂಡ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ನೀನಾಸಂನ ತರಭೇತಿದಾರ ರಿಂದ ಮೂರು ತಿಂಗಳ ತರಬೇತಿ ಕೂಡ ಪಡೆದಿದ್ದು, ಚಿತ್ರದಲ್ಲಿ ಐದು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಾ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷಯನ್ನ ಇಟ್ಕೊಂಡಿದ್ದಾರೆ.’
ಇನ್ನು ಚಿತ್ರವನ್ನ ಕೇರಳ, ಮೈಸೂರು, ಕೋಲಾರ, ಹಾಗೂ ಕೆಜಿಎಫ್​ಗಳಲ್ಲಿ ಚಿತ್ರೀಕರಿಸಲಾಗಿದ್ದು ವಿಶೇಷವಾಗಿ ಕಟ್ಟಿಗೆಗಳನ್ನು ಬಳಸಿಕೊಂಡು ನಿರ್ಮಾಣ ಮಾಡಿದ್ದ ಸೆಟ್​ನಲ್ಲಿ 28 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಯುವಕಿಶೋರ್ ಎಂಬುವವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಅವಿನಾಶ್, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್, ವಿನಯಾ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಬೇಬಿ ಐಶ್ವರ್ಯಾ ನಟಿಸಿದ್ದಾರೆ. ವಿಕ್ಕಿ ಹೆಸರಿನ ರಾಟ್​ವಿಲ್ಲರ್ ತಳಿಯ ಶ್ವಾನವೂ ಚಿತ್ರದ ಪ್ರಮುಖ ಪಾತ್ರಧಾರಿ ಎನ್ನುತ್ತದೆ ಚಿತ್ರತಂಡ. ಕುನ್ನಿ ಗುಡಿಪಾಟಿ ಸಂಗೀತ ಸಂಯೋಜಿಸಿದ್ದು ಚಿತ್ರವು ಕನ್ನಡ,ತೆಲುಗು ಹಾಗೂ ತಮಿಳಿನಲ್ಲಿ ಬರ್ತಾ ಇದ್ದು, ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ಸಿಕ್ಕಿದೆ. ಎಲ್ಲ ಅಂದುಕೊಂಡಂತೆ ಆದರೆ ಚಿತ್ರ ಆಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.ಇನ್ನೂ ಇಷ್ಟೆಲ್ಲಾ ಕ್ಯೂರಿಯಾಸಿಟಿ,ಎಲಿಮೆಂಟ್ ನ ಹೊಂದಿರೋ ಈ ಖನನ ಚಿತ್ರ ತೆರೆ ಮೇಲೆ ಹೇಗೆ ವರ್ಕ್ ಆಗತ್ತೋ ಕಾದು ನೋಡ್ಬೇಕು.

Be the first to comment

Leave a Reply

Your email address will not be published. Required fields are marked *

Translate »
error: Content is protected !!