ಖನನ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಗುರುತಿಸಿಕೊಂಡಿರುವ ಆರ್ಯವರ್ಧನ್ ಅವರು ಈಗ ಹ್ಯಾಪಿ ಮೂಡ್‍ನಲ್ಲಿದ್ದರೆ, ಇದಕ್ಕೆ ಕಾರಣ ಅವರ ನಟಿಸಿರುವ ಖನನ ಚಿತ್ರ ಅರ್ಧಶತಕ (50 ದಿನ) ಬಾರಿಸಿದ್ದರೆ, ಅವರ ಎರಡನೇ ಚಿತ್ರ ಸೆಟ್ಟೇರುತ್ತಿದೆ.ರಾಧಾ ಅವರು ನಿರ್ದೇಶಿಸಿರುವ ಖನನ ಚಿತ್ರಕ್ಕೆ ಬಂಡವಾಳ ಹೂಡಿದ್ದ ಆರ್ಯವರ್ಧನ್‍ರ ತಂದೆ ಶ್ರೀನಿವಾಸ್ ಅವರೇ ಹೊಸ ಚಿತ್ರದ ನಿರ್ಮಾಪಕರಾಗಿದ್ದು ಈ ಚಿತ್ರವನ್ನು ರಾಹುಲ್ ಈರಯ್ಯ ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಖನನದ 50ನೆ ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ನಾಗಣ್ಣ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ರಾಹುಲ್ ಈರಯ್ಯಗೆ ಇದು ಮೊದಲ ಚಿತ್ರವಾಗಿದ್ದು, ಚಿತ್ರದ ಟೈಟಲ್ ಅಂತಿಮ ಆಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಈ ಚಿತ್ರದ ಕಥೆ ಹೆಣೆಯುವ ಕೆಲಸದಲ್ಲಿದ್ದ ರಾಹುಲ್ ಈರಯ್ಯ, ಆರ್ಯವರ್ಧನ್ ಅವರೇ ನಮ್ಮ ಚಿತ್ರಕ್ಕೆ ಸೂಕ್ತವಾದ ನಾಯಕ ಎಂದು ನಿರ್ಧರಿಸಿದ್ದಾರೆ. ಇದು ಮಲ್ಟಿಸ್ಟಾರರ್ ಚಿತ್ರವಾಗಿದ್ದು ಆರ್ಯವರ್ಧನ್‍ರೊಂದಿಗೆ ರವಿಹಿಸ್ಟರಿ ಚಿತ್ರದಲ್ಲಿ ನಟಿಸಿದ್ದ ಕಾರ್ತಿಕ್ ಕೂಡ ನಾಯಕನಾಗಿ ನಟಿಸಿದ್ದು ಇದೊಂದು ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಚಿತ್ರದ್ದು, ಕಥೆಗೆ ಹೊಂದುವಂತಹ ಹೀರೋಯಿನ್‍ಗಳನ್ನು ಸದ್ಯದಲ್ಲೇ ಆಯ್ಕೆ ಮಾಡಲಿದ್ದೇವೆ ಎಂದು ನಿರ್ದೇಶಕ ರಾಹುಲ್ ಈರಯ್ಯ ಹೇಳಿದರು. ಇತ್ತೀಚೆಗೆ ಈ ಚಿತ್ರದಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ಸುನೀಲ್ ಅವರು ಛಾಯಾಗ್ರಹಣ ಮಾಡುತ್ತಿದ್ದೇರೆ
Be the first to comment