ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದ ದೀಪಕ್ ಖಳ ನಾಯಕನಾಗಿ ಮರು ಎಂಟ್ರಿ ನೀಡುತ್ತಿದ್ದಾರೆ. ‘ಶಿಷ್ಯ ‘ಸಿನಿಮಾ ಖ್ಯಾತಿಯ ದೀಪಕ್ ಚಿತ್ರ ರಂಗ ಪ್ರವೇಶಿಸಿ ಹದಿನೈದು ವರ್ಷಗಳಾಗಿ ವೆ. ಇವೆಲ್ಲದರ ಬಗ್ಗೆ ಅವರು ಮಾಧ್ಯಮದ ಜೊತೆ ಮಾತಾಡಿದ್ದಾರೆ.
ರಕ್ಷಿತಾ ಸಹೋದರ ನಾಯಕನಾಗಿ ನಟಿಸುತ್ತಿರುವ ಪ್ರೇಮ್ ನಿರ್ದೇಶನದ ‘ಏಕ್ ಲವ್ಯ’ ಚಿತ್ರದಲ್ಲಿ ಖಳನಾಗಿ ನಟಿಸಿರುವ ದೀಪಕ್ ಪ್ರಜ್ವಲ್ ದೇವರಾಜ್ ಅವರ ‘ವೀರಂ ‘ ಸಿನಿಮಾದಲ್ಲಿಯೂ ವಿಲನ್ ಆಗಿ ಅಭಿನಯಿಸಿದ್ದೇ ನೆ ಎಂದರು. ನಾಯಕನಾಗಿ ಶಿಷ್ಯ, ಚೆನ್ನ, ಬಾ ಬೇಗ ಚಂದಮಾಮ, 18 ಕ್ರಾಸ್ ಮಾಗಡಿ, ಬೆಳ್ಳಿ, ತ್ಯಾಗು, ದೀನ, ಜನವರಿ ಒಂದು ಬಿಡುಗಡೆ ಮೊದಲಾದ ಚಿತ್ರಗಳ ಮೂಲಕ ಅವಕಾಶ ನೀಡಿದ ಗಣ್ಯರನ್ನು ಸ್ಮರಿಸಿ ಸನ್ಮಾನಿಸಿದರು. ಬಾ ಮಾ ಹರೀಶ್, ಬಾ ಮಾ ಗಿರೀಶ್, ಪಿ. ಆರ್.ಓ. ವಿಜಯ್ ಕುಮಾರ್, ಪಿ.ಆರ್. ಓ. ನಾಗೇಂದ್ರ ನಿರ್ಮಾಪಕರು ಗಳಾದ ಕುಮಾರಸ್ವಾಮಿ, ಸುರಾನಾ, ಶಶಿಧರ್ ಮತ್ತು ನಿರ್ದೇಶಕರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
“ನಾನು ಇದುವರೆಗಿನ ಚಿತ್ರ ಜೀವನದಲ್ಲಿ ಯಾರ ಮೇಲೆಯೂ ಆಪಾದನೆಗಳನ್ನು ಮಾಡಿಲ್ಲ, ನನ್ನ ಸಮಸ್ಯೆಗಳನ್ನು ನಾನೇ ಪರಿಹರಿಸಿಕೊಂಡಿದ್ದೇನೆ, ಯಾವುದೇ ಕತೆ ಚಿತ್ರಕತೆಗಳಲ್ಲಿ ಮೂಗು ತೂರಿಸಿಲ್ಲ” ಎನ್ನುವುದನ್ನು ದೀಪಕ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. “ನಾನಿನ್ನು ನಾಯಕನಲ್ಲ ,ಖಳ” ಎಂದು ಹೇಳುವಾಗಅವರು ಭಾವುಕರಾಗಿದ್ದರು. ಈ ಸಂದರ್ಭದಲ್ಲಿ ದೀಪಕ್ ನಟನೆಯ ಚಿತ್ರಗಳ ತುಣುಕನ್ನು ಪ್ರದರ್ಶಿಸಲಾಯಿತು
Pingback: Germantown Best Roof Guy