ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ ಚಿತ್ರಕ್ಕೆ ಪಡೆದ ಸಂಭಾವನೆ ಬಗ್ಗೆ ಚರ್ಚೆ ನಡೆದಿದ್ದು, ಅವರು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಜಿಎಫ್ 2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಯಶ್ ಅವರು ಇನ್ನೂ ಸಂಭಾವನೆ ಪಡೆದಿಲ್ಲ ಎಂದರೆ ಅಚ್ಚರಿ ಆಗಬಹುದು. ಚಿತ್ರದಲ್ಲಿ ಯಶ್ ಅವರು ಸಂಭಾವನೆ ಬದಲಿಗೆ ಶೇರ್ ಪಡೆಯಲಿದ್ದಾರೆ.
ಇತೀಚೆಗೆ ಯಶ್ ಅಲ್ಲದೇ ಹಲವರು ಸಂಭಾವನೆ ಬದಲಿಗೆ ಶೇರ್ ಪಡೆದುಕೊಳ್ಳುತ್ತಿದ್ದಾರೆ. ನಾಯಕ ನಟರು ಶೇರ್ ಪಡೆದುಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ. ಶೇರ್ ಸಿಸ್ಟಮ್ ನಲ್ಲಿ ಲಾಭ ಹೆಚ್ಚಾದರೆ ಬರುವ ಮೊತ್ತ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಹಿಟ್ ಅಗಲಿಲ್ಲವಾದರೆ ಬರುವ ಮೊತ್ತ ಕಡಿಮೆ ಆಗುತ್ತದೆ.
ಕೆಜಿಎಫ್ 1 80 ಕೋಟಿ ರೂ ವೆಚ್ಚದಲ್ಲಿ ತಯಾರಾಗಿದ್ದು, 200 ಕೋಟಿಗೂ ಅಧಿಕ ಮೊತ್ತ ಕಲೆಹಾಕಿದೆ. ಕೆಜಿಎಫ್ 2, 100 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಚಿತ್ರದ ಗಳಿಕೆ ಯಾವ ಮಟ್ಟಿಗೆ ಇರಬಹುದು ಎನ್ನುವ ಕುತೂಹಲ ಇದೆ.
ಏಪ್ರಿಲ್ 14ಕ್ಕೆ ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ. ಚಿತ್ರತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ದೆಹಲಿಯಿಂದ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಮುಂಬೈ, ಕೊಚ್ಚಿ, ತಮಿಳು ನಾಡು, ಆಂಧ್ರ-ತೆಲಂಗಾಣ ಸೇರಿದಂತೆ ಕರ್ನಾಟಕದಲ್ಲೂ ಚಿತ್ರದ ಪ್ರಚಾರವನ್ನು ನಡೆಸಲಾಗಿದೆ.
ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ಅಭಿನಯಿಸಿರುವುದರಿಂದ ಉತ್ತರ ಭಾರತದಲ್ಲೂ ಚಿತ್ರದ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ರಾಕಿಂಗ್ ಸ್ಟಾರ್ ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಸೂಪರ್ ಹಿಟ್ ಆಗಿದೆ.
Be the first to comment