ಕೆಜಿಎಫ್ 3 ಚಿತ್ರ 2025ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.
ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಕೆಜಿಎಫ್ 3 ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಇನ್ನೂ ಆರಂಭ ಆಗಿಲ್ಲ. 2025ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಕೆಜಿಎಫ್ ಸೀರಿಸ್ನಲ್ಲಿ ಐದು ಪಾರ್ಟ್ಗಳು ಬರಬಹುದು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಾಂಡ್ ಪಾತ್ರವನ್ನು ಬೇರೆಯವರು ಮಾಡಿದ್ದರು. ಅದೇ ರೀತಿ ‘ಕೆಜಿಎಫ್’ ಸೀರಿಸ್ನ ರಾಕಿಭಾಯ್ ಪಾತ್ರವನ್ನು ಬೇರೆಯವರು ಮಾಡಬಹುದು. ಇಲ್ಲಿ ಹೀರೋಗಳು ಬದಲಾಗುತ್ತಿರುತ್ತಾರೆ’ ಎಂದಿದ್ದಾರೆ ವಿಜಯ್ ಕಿರಗಂದೂರು.
ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರದ ಬಳಿಕ ಪ್ರಶಾಂತ್ ನೀಲ್ ಜೂ.ಎನ್ಟಿಆರ್ ಜತೆಗಿನ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಬಳಿಕ ‘ಕೆಜಿಎಫ್ 3’ ಕೆಲಸದಲ್ಲಿ ಪ್ರಶಾಂತ್ ನೀಲ್ ಕೆಲಸ ಮಾಡಲಿದ್ದಾರೆ.
‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ರಾಕಿ (ಯಶ್) ಮೃತಪಡುತ್ತಾನೆ. ಆತ ಭಾರತದಲ್ಲಿ ಮಾಡಿದ ಕೃತ್ಯಗಳ ಲೆಕ್ಕವಷ್ಟೇ ಸರ್ಕಾರಕ್ಕೆ ಸಿಕ್ಕಿರುತ್ತದೆ. ವಿದೇಶದಲ್ಲೂ ಆತ ಒಂದಷ್ಟು ಕೃತ್ಯಗಳನ್ನು ಮಾಡಿದ್ದ. ‘ಕೆಜಿಎಫ್ 3’ ಚಿತ್ರದಲ್ಲಿ ಈ ವಿಚಾರ ಇರಲಿದೆ ಎನ್ನಲಾಗುತ್ತಿದೆ.
__
Be the first to comment