ಕೆಜಿಎಫ್ 3 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ಕೊಟ್ಟಿದ್ದು, ಅನಗತ್ಯವಾಗಿ ಮತ್ತಷ್ಟು ಕತೆ ತೂರಿಸಿ ಮೂರನೇ ಭಾಗ ಮಾಡುವ ಬಗ್ಗೆ ಯೋಚನೆ ಕೂಡಾ ಮಾಡಿಲ್ಲ ಎಂದಿದ್ದಾರೆ.
ಕೆಜಿಎಫ್ ಸಬ್ಜೆಕ್ಟ್ ತುಂಬಾ ದೊಡ್ಡದು. ಇದನ್ನು ಒಂದೇ ಭಾಗದಲ್ಲಿ ಹೇಳಿ ಮುಗಿಸಲಾಗದು ಎನಿಸಿತ್ತು. ಹೀಗಾಗಿ ಎರಡನೇ ಭಾಗವಾಗಿ ಸಿನಿಮಾ ಮಾಡಿದೆವು. ಆದರೆ ಈಗ ಮೂರನೇ ಭಾಗ ಮಾಡುವ ಯೋಜನೆಯಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
ಕೆಜಿಎಫ್ ಚಿತ್ರ ಕನ್ನಡ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿಯಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾಲು ಸಾಲು ರಜೆ ಇರುವ ಕಾರಣ ಜನರು ಥಿಯೇಟರ್ ಕಡೆಗೆ ಬರುವ ನಿರೀಕ್ಷೆ ಇದೆ.
ಸಿನಿಮಾ ಇಡೀ ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಮುಂಗಡ ಟಿಕೆಟ್ ಮಾರಾಟದಲ್ಲಿ ಮುಂಬೈನಲ್ಲಿ ‘RRR’ ಸಿನಿಮಾದ ದಾಖಲೆ ಮುರಿಯುವಲ್ಲಿ ‘ಕೆಜಿಎಫ್ 2’ ಸಿನಿಮಾ ಯಶಸ್ವಿ ಆಗಿದೆ.
ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಗಳಿಕೆಯಲ್ಲಿ ದಾಖಲೆಯನ್ನು ಮಾಡುವ ನಿರೀಕ್ಷೆ ಹೊಂದಲಾಗಿದೆ.
____






Be the first to comment