ಕೆಜಿಎಫ್‌-3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೆಜಿಎಫ್‌ 2 ರಿಲೀಸ್ ಆದ  3  ವರ್ಷದ ಸಂಭ್ರಮದಲ್ಲಿ ‘ಕೆಜಿಎಫ್‌ 3’ ಸಿನಿಮಾ ಬಗ್ಗೆ ಹೊಂಬಾಳೆ ಸುಳಿವು ಕೊಟ್ಟಿದೆ.

ಹೊಂಬಾಳೆ ಸ್ಪೆಷಲ್‌ ವಿಡಿಯೋ ರಿವೀಲ್‌ ಮಾಡಿ ‘ಕೆಜಿಎಫ್‌ 3’ ಬಗ್ಗೆ ಸುಳಿವು ಕೊಟ್ಟಿದೆ.  ಈ ವಿಡಿಯೋದಲ್ಲಿ ಸಿನಿಮಾಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.  ಸದ್ಯಕ್ಕೆ ಕೆಜಿಎಫ್‌ 3 ಬರೋದು ಅಸಾಧ್ಯ.  ಪ್ರಶಾಂತ್‌ ನೀಲ್‌ ಜೂನಿಯರ್‌ ಎನ್‌ ಟಿಆರ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ ಯಶ್‌ ಟಾಕ್ಸಿಕ್‌ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ರಾಮಾಯಣ ಚಿತ್ರದಲ್ಲಿ  ನಟಿಸುತ್ತಿದ್ದಾರೆ. ಈ ಕೆಲಸಗಳು ಮುಗಿದ ಬಳಿಕೆ ಸಿನಿಮಾ ಟೇಕಾಫ್‌ ಆಗುವ ಸಾಧ್ಯತೆ ಇದೆ.

ಕೆಜಿಎಫ್‌ 2 ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್   ಮೋಡಿ ಮಾಡಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಕೆಜಿಎಫ್‌ 2 ಸಿನಿಮಾ ಹತ್ತಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್‌ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್‌ ಅವರ ಕಲಾ ನಿರ್ದೇಶನ ಚಿತ್ರದ ಹೈಲೈಟ್ಸ್‌. ಇದೀಗ ಚಾಪ್ಟರ್‌ 3 ಮೇಲೆ ಸಿನಿ ಪ್ರಿಯರ ದೃಷ್ಟಿ ನೆಟ್ಟಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!