ಕೆಜಿಎಫ್ 3 ಬರುವ ಬಗ್ಗೆ ಯಶ್ ಮಾತು

‘ಕೆಜಿಎಫ್ ಚಾಪ್ಟರ್ 3’ ತೆರೆಯ ಮೇಲೆ ಬರುವ ಬಗ್ಗೆ ಯಶ್ ಕೊನೆಗೂ ಸುಳಿವು ನೋಡಿದ್ದಾರೆ.

ಅಂತರಾಷ್ಟ್ರೀಯ ನ್ಯೂಸ್ ಪೋರ್ಟಲ್‌ಗೆ ಯಶ್ ಪ್ರತಿಕ್ರಿಯೆ ನೀಡಿದ್ದು, ‘ಈಗಾಗಲೇ ನಾನು ಹಾಗೂ ಪ್ರಶಾಂತ್ ಇಬ್ಬರೂ ಹಲವು ದೃಶ್ಯಗಳ ಬಗ್ಗೆ ಚರ್ಚಿಸಿದ್ದೇವೆ. ‘ಚಾಪ್ಟರ್ 2’ನಲ್ಲಿ ನಾವು ಇನ್ನೂ ಸಾಕಷ್ಟು ವಿಷಯಗಳನ್ನು ಹೇಳುವುದಿತ್ತು. ‘ಚಾಪ್ಟರ್ 3′ ನಿರ್ಮಿಸಲು ಹಲವು ಸಾಧ್ಯಗಳಿವೆ ಎಂಬುದು ನಮಗೆ ಗೊತ್ತಿದೆ. ಕಿಕ್ ಕೊಡುವಂತಹ ಸಾಕಷ್ಟು ಸೀನ್‌ಗಳು ಇನ್ನೂ ಇವೆ. ಆದರೆ ಇದು ಕೇವಲ ಒಂದು ಐಡಿಯಾ ಅಷ್ಟೆ. ಸದ್ಯಕ್ಕೆ ಈ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದೇವೆ.’ ಎಂದು ಹೇಳಿದ್ದಾರೆ.

‘ಕೆಜಿಎಫ್’ ಸಿನಿಮಾ ಮಾಡುವಾಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಆಲೋಚನೆ ಇರಲಿಲ್ಲ. ಭಾಗ 2 ಮಾಡುವ ಆಲೋಚನೆ ಕೂಡ ಇರಲಿಲ್ಲ. ಆದರೆ ಎರಡು ಪಾರ್ಟ್ ಮಾಡಲು ನಿರ್ಧರಿಸಿದ ಬಳಿಕ ಚಾಪ್ಟರ್ 1 ಬಗ್ಗೆ ಚಿಂತೆ ಶುರುವಾಗಿತ್ತು. ಬೆಸ್ಟ್ ಪಾರ್ಟ್ ‘ಚಾಪ್ಟರ್ 2’ ಆಗಿತ್ತು ಒಂದು ವೇಳೆ ‘ಚಾಪ್ಟರ್ 1’ ಗೆಲ್ಲದೆ ಹೋದರೆ ‘ಚಾಪ್ಟರ್ 2’ ಮಾಡಲು ಸಾಧ್ಯ ಇರುತ್ತಿರಲಿಲ್ಲ. ಹೀಗಾಗಿ ‘ಚಾಪ್ಟರ್ 1’ ಬಗ್ಗೆ ತಲೆಕೆಡಿಸಿಕೊಂಡಿದ್ದೆ” ಎಂದು ಯಶ್ ಹೇಳಿದ್ದಾರೆ.

ಪ್ರಶಾಂತ್ ನೀಲ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಸಲಾರ್’, ಜೂ.ಎನ್‌ಟಿಆರ್ ಸಿನಿಮಾ ಮುಗಿಸಿದ ಬಳಿಕವೇ ‘ಕೆಜಿಎಫ್ 3’ ಸೆಟ್ಟೇರಬಹುದು ಇದಕ್ಕೆ ಚಿತ್ರತಂಡವೇ ಉತ್ತರ ನೀಡಬೇಕಿದೆ.

‘ಕೆಜಿಎಫ್ 2’ ಸಿನಿಮಾ ಇದುವರೆಗೆ 930 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದ್ದು, ಅತೀ ಹೆಚ್ಚಿನ ಗಳಿಕೆಯತ್ತ ಸಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!