ಕೆಜಿಎಫ್ 2 ಟ್ರೈಲರ್ ಮಾ.27ಕ್ಕೆ

ರಾಕಿಂಗ್ ಸ್ಟಾರ್ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೈಲರ್ ಮಾರ್ಚ್​ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. ಟ್ರೇಲರ್​ ಬಿಡುಗಡೆ ಬಗ್ಗೆ ‘ಹೊಂಬಾಳೆ ಫಿಲ್ಸ್ಮ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್ 2 ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಟ್ರೇಲರ್​ ಬಿಡುಗಡೆ ಆದ ಬಳಿಕ ನಿರೀಕ್ಷೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.

ಈ ಸಿನಿಮಾವು ಏಪ್ರಿಲ್ 14 ಕ್ಕೆ ತೆರೆಗೆ ಬರಲು ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ಕೆಜಿಎಫ್ 2 ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದ‌ ಬಿಡುಗಡೆಗೆ ದಿನ ಗಣನೆ ಶುರುವಾಗಿದ್ದು, ಭಾರತದಾದ್ಯಂತ ಕೆಜಿಎಫ್ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇದ್ದು, ಸಿನಿಮಾ ಕುತೂಹಲ ಮೂಡಿಸಿದೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಸಿನಿಮಾವನ್ನು ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!