ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದ ಟಿಕೆಟ್ ಬುಕಿಂಗ್ ಕರ್ನಾಟಕದಲ್ಲಿ ಏಪ್ರಿಲ್ 10 ರಂದು ಪ್ರಾರಂಭಗೊಳ್ಳಲಿದೆ.
ಸಿನಿಮಾ ಬಿಡುಗಡೆಗೆ ಮೂರು ದಿನ ಮುಂಚಿತವಾಗಿ ಕರ್ನಾಟಕದಲ್ಲಿ ಬುಕ್ ಮೈ ಶೋ, ಪೇಟಿಎಂ ಬಳಸಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.
ಏಪ್ರಿಲ್ 10 ರಂದು ಕರ್ನಾಟಕದ ಜೊತೆಗೆ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯೂ ಟಿಕೆಟ್ ಬುಕಿಂಗ್ ಶುರು ಆಗಲಿದೆ. ಸಿನಿಮಾದ ಟಿಕೆಟ್ ದರ, ಚಿತ್ರಮಂದಿರಗಳ ಒಟ್ಟು ಸಂಖ್ಯೆ, ವಿವಿಧ ಭಾಷೆಯ ಚಿತ್ರಮಂದಿರ ಹಂಚಿಕೆ ವಿಚಾರಗಳು ಅಂದು ಗೊತ್ತಾಗಲಿದೆ.
‘ಕೆಜಿಎಫ್ 2′ ಸಿನಿಮಾ ವಿಶ್ವದಾದ್ಯಂತ ಸುಮಾರು 6 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಮೊದಲ ಬಾರಿಗೆ ಗ್ರೀಸ್ ನಲ್ಲಿ ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿದೆ.
ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ 7 ರಿಂದಲೇ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಟಿಕೆಟ್ ಬುಕ್ಕಿಂಗ್ ಓಪನಿಂಗ್ ಆಗಿದೆ.
ಕೆಜಿಎಫ್ 2’ ಸಿನಿಮಾದ ಹವಾ ದಿನೇ ದಿನೇ ಜೋರಾಗುತ್ತಿದೆ. ಚಿತ್ರ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ.
ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಗಳಿಕೆಯಲ್ಲಿ ದಾಖಲೆಯನ್ನು ಮಾಡುವ ನಿರೀಕ್ಷೆ ಹೊಂದಲಾಗಿದೆ.
____

Be the first to comment