‘ಕೆಜಿಎಫ್ 2’ ಸಿನಿಮಾದ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ.
ತಾಯಿ ಸೆಂಟಿಮೆಂಟ್ನ ‘ಗಗನ ನೀ’ ಹೆಸರಿನ ಹಾಡು ಇಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ.
ರಾಕಿ ಭಾಯ್ ತಾಯಿ ಮಗನಿಗಾಗಿ ಹಾಡುವ ಹಾಡು ಇದಾಗಿದೆ. ಮಗ ಹೇಗೆ ಬೆಳೆಯಬೇಕು? ಹೇಗಿರಬೇಕು ಎಂದು ತಾಯಿಯೊಬ್ಬಳು ಹೇಳುವ ಹಾಡು ಇದಾಗಿದೆ.
ಈ ಹಾಡಿಗೆ ಸಾಹಿತ್ಯವನ್ನು ಕಿನ್ನಲ ರಾಜ ಬರೆದಿದ್ದಾರೆ. ಈ ಹಿಂದೆ ‘ಕೆಜಿಎಫ್ 1’ ಸಿನಿಮಾದ ಸೆಂಟಿಮೆಂಟ್ ಹಾಡಿಗೂ ಇವರೇ ಸಾಹಿತ್ಯ ಬರೆದಿದ್ದರು. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಹಾಡಿನ ಮುನ್ನ ‘ತೂಫಾನ್’ ಹೆಸರಿನ ಅಬ್ಬರದ ಹಾಡು ಬಿಡುಗಡೆ ಆಗಿತ್ತು.
ಕೆಜಿಎಫ್ 2′ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಗಳಿಕೆಯಲ್ಲಿ ದಾಖಲೆಯನ್ನು ಮಾಡುವ ನಿರೀಕ್ಷೆ ಹೊಂದಲಾಗಿದೆ.
___
Be the first to comment