ಕೆಜಿಎಫ್2 ಮೊದಲ ಸಾಂಗ್ ರಿಲೀಸ್

ಕೆಜಿಎಫ್ 2 ಚಿತ್ರದ ತೂಫಾನ್ ಹಾಡು ಇಂದು ರಿಲೀಸ್ ಆಗಿದೆ.

ಯೂಟ್ಯೂಬ್‌ನಲ್ಲಿ ಹಾಡು ರಿಲೀಸ್ ಆಗಿದೆ. ಏಕ ಕಾಲದಲ್ಲಿ ಐದು ಭಾಷೆಗಳಲ್ಲಿ ‘ತೂಫಾನ್‌…’ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಕೆಜಿಎಫ್ ಚಿತ್ರದಲ್ಲಿ ರವಿ ಬಸ್ರೂರು ಅವರ ಸಂಗೀತ ಹಿಟ್​ ಆಗಿತ್ತು. ಕೆಜಿಎಫ್ 2ಕ್ಕೂ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಸಂಗೀತದ ಮೂಲಕ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದ್ದಾರೆ.

ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರ ಏಪ್ರಿಲ್‌ 14ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಯಶ್ ನಟನೆಯ ಚಿತ್ರ ದೇಶ- ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್​ 2′ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಮಾರ್ಚ್​ 27ರಂದು ಸಿನಿಮಾದ ಟ್ರೇಲರ್ ರಿಲೀಸ್​ ಮಾಡುವ ಬಗ್ಗೆ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದೆ. ಭುವನ್‌ ಗೌಡ ಕ್ಯಾಮೆರಾ ಈ ಚಿತ್ರಕ್ಕಿದೆ.

ಕೆಜಿಎಫ್: ಚಾಪ್ಟರ್ 2ನ್ನು ಏಪ್ರಿಲ್ 13ರಂದು ಪ್ರೀಮಿಯರ್‌ ಶೋ ನಡೆಸುವುದಾಗಿ ತಿಳಿಸಲಾಗಿದೆ. ಪ್ರೀಮಿಯರ್ ಶೊ ಉತ್ತರ ಅಮೇರಿಕಾದಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಹೊಂಬಾಳೆ ಫಿಲ್ಸ್ಮ್​, ‘ಉತ್ತರ ಅಮೆರಿಕ ನಾನು ಬರುತ್ತಿದ್ದೇನೆ. ಸಿಡಿಲಿನ ಅನುಭವ ಪಡೆಯಲು ತಯಾರಾಗಿ’ ಎಂದು ಟ್ವೀಟ್ ಮಾಡಿದೆ. ದಕ್ಷಿಣ ಭಾರತದಲ್ಲಿ ಪ್ರೀಮಿಯರ್ ಶೋವನ್ನು ಸರೆಗಮ ಸಿನಿಮಾಸ್ ಆಯೋಜನೆ ಮಾಡಲಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್​ ನ ಸಂಜಯ್ ದತ್, ರವೀನಾ ಟಂಡನ್ , ಪ್ರಕಾಶ್ ರಾಜ್, ಮಾಳವಿಕಾ, ಸರ್ಚನಾ ಜೋಯಿಸ್, ರಾವ್ ರಮೇಶ್, ಈಶ್ವರಿ ರಾವ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ನಟಿಸಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!