ಕೆಜಿಎಫ್ 2 ಶೂಟಿಂಗ್ ಸ್ಟಾರ್ಟ್…ಅನಂತನಾಗ ಬದಲಿಗೆ ಪ್ರಕಾಶ್ ರೈ..!

ಕೆಜಿಎಫ್ ಚಾಪ್ಟರ್-2 ಇಂದಿನಿಂದ ಚಿತ್ರೀಕರಣಕ್ಕೆ ಮರು ಚಾಲನೆ ನೀಡಿದೆ. ಕೊರೊನಾ ವೈರಸ್‌ನಿಂದ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ ಮತ್ತೆ ಅಖಾಡಕ್ಕಿಳಿದಿದೆ. ಬ್ರೇಕ್ ಬಳಿಕ ಇಂದಿನಿಂದ ಕೆಜಿಎಫ್‌ 2 ಸಿನಿಮಾ ಚಿತ್ರೀಕರಣ ಪುನರ್‌ಪ್ರಾರಂಭವಾಗಿದ್ದು, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ ಇನ್ನೂ ಕೆಲವು ನಟರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ 25 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಯಶ್ ಅವರ ದೃಶ್ಯಗಳೂ ಇದ್ದು ಕೆಲವೇ ದಿನಗಳಲ್ಲಿ ಯಶ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ

ಪ್ರಕಾಶ್ ರಾಜ್ ಹೊಸ ಎಂಟ್ರಿ! ಕೆಜಿಎಫ್ ಚಾಪ್ಟರ್ 2ನಲ್ಲಿ ಹಲವು ಹೊಸ ಮುಖಗಳು ಕಾಣಲಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪ್ರಕಾಶ ರಾಜ್. ಈಗಾಗಲೇ ಅಧೀರನ ಪಾತ್ರಕ್ಕೆ ಸಂಜಯ್ ದತ್ ಆಗಮನವಾಗಿದೆ. ಈಗ ಇನ್ನೊಂದು ಮುಖ್ಯ ಪಾತ್ರಕ್ಕೆ ಪ್ರಕಾಶ್ ರಾಜ್ ಎಂಟ್ರಿಯಾಗಿದ್ದಾರೆ. ಈ ಮೂಲಕ ಚಾಪ್ಟರ್ 2 ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.

ಕೆಜಿಎಫ್ 2 ಸಿನಿಮಾ ಶೂಟಿಂಗ್ ಆರಂಭವಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೇ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಬೇಗ ಶೂಟಿಂಗ್ ಮುಗಿದು ಸಿನಿಮಾ ಬಿಡುಗಡೆಯಾಗಲಿ ಎಂದು ಹಾರೈಸಿದ್ದಾರೆ.

This Article Has 2 Comments
  1. Pingback: dumps with pin shop

  2. Pingback: sexual attraction in therapy

Leave a Reply

Your email address will not be published. Required fields are marked *

Translate »
error: Content is protected !!