ಆರ್ ಆರ್ ಆರ್ ದಾಖಲೆ ಮುರಿದ ಕೆಜಿಎಫ್2

ಕೆಜಿಎಫ್ 2 ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದ್ದು, ಪ್ರಿ ಬುಕಿಂಗ್ ನಲ್ಲಿ ಕೆಜಿಎಫ್ 2 ಹಿಂದಿ ಅವತರಣಿಕೆ 20 ಕೋಟಿ ರೂ.ಗಳಿಕೆ ಮಾಡಿ ಆರ್ ಆರ್ ಆರ್ ಚಿತ್ರದ ದಾಖಲೆಯನ್ನು ಮುರಿದಿದೆ.

ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಲಿದ್ದು, ಬಿಡುಗಡೆ ಮೊದಲೇ ಹಲವು ದಾಖಲೆ ಮಾಡುತ್ತಿದೆ. ಪ್ರಿ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕೆಜಿಎಫ್ 2 ಸಿನಿಮಾ ಹಿಂದಿಯಲ್ಲಿ ಆರ್ ಆರ್ ಆರ್ ಸಿನಿಮಾ ಮಾಡಿದ್ದ ದಾಖಲೆ ಹಿಂದಿಕ್ಕಿದೆ.

‘ಕೆಜಿಎಫ್ 2′ ಸಿನಿಮಾ ವಿಶ್ವದಾದ್ಯಂತ ಸುಮಾರು 6 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಮೊದಲ ಬಾರಿಗೆ ಗ್ರೀಸ್ ನಲ್ಲಿ ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿದೆ.

ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ 7 ರಿಂದಲೇ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಟಿಕೆಟ್ ಬುಕ್ಕಿಂಗ್ ಓಪನಿಂಗ್ ಆಗಿದೆ.

ಕೆಜಿಎಫ್ 2’ ಸಿನಿಮಾದ ಹವಾ ದಿನೇ ದಿನೇ ಜೋರಾಗುತ್ತಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಗಳಿಕೆಯಲ್ಲಿ ದಾಖಲೆಯನ್ನು ಮಾಡುವ ನಿರೀಕ್ಷೆ ಹೊಂದಲಾಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!