ಟಿಕೆಟ್ ಬುಕ್ಕಿಂಗ್ ನಲ್ಲಿ ಕೆಜಿಎಫ್ 2 ದಾಖಲೆ

ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ದಾಖಲೆಯನ್ನು ‘ಕೆಜಿಎಫ್ 2’ ನಿರ್ಮಿಸಿದೆ.

ಈ ಚಿತ್ರದ 17.1 ಮಿಲಿಯನ್ ಟಿಕೆಟ್ ‘ಬುಕ್ ಮೈ ಶೋ’ ಮೂಲಕ ಮಾರಾಟವಾಗಿವೆ. ಬುಕ್ ಮೈ ಶೋ ನಲ್ಲಿ ‘ಬಾಹುಬಲಿ 2’ ಸಿನಿಮಾದ 16 ಮಿಲಿಯನ್ ಟಿಕೆಟ್‌ಗಳು ಮಾತ್ರ ಮಾರಾಟ ಆಗಿದ್ದವು. ಬಾಹುಬಲಿ 2 ಸಿನಿಮಾ ಬಿಟ್ಟರೆ ಬುಕ್ ಮೈ ಶೋ ಮೂಲಕ ಅತಿ ಹೆಚ್ಚು ಟಿಕೆಟ್ ಮಾರಾಟ ಆಗಿರುವುದು ‘ಕೆಜಿಎಫ್ 2’ ಸಿನಿಮಾದ ಟಿಕೆಟ್ ಆಗಿದೆ.

RRR ಸಿನಿಮಾದ ಟಿಕೆಟ್‌ಗಳು ‘ಬುಕ್ ಮೈ ಶೋ’ನಲ್ಲಿ ಒಟ್ಟು 13.4 ಮಿಲಿಯನ್ ಮಾರಾಟ ಆಗಿವೆ. ಹಾಲಿವುಡ್‌ನ ‘ಡಾಕ್ಟರ್ ಸ್ಟ್ರೇಂಜ್’ ಚಿತ್ರದ 2.5 ಮಿಲಿಯನ್ ಟಿಕೆಟ್ ಮಾರಾಟ ಆಗಿವೆ. ‘ಬೀಸ್ಟ್’ ಸಿನಿಮಾದ 2 ಮಿಲಿಯನ್ ಟಿಕೆಟ್ ಮಾರಾಟ ಆಗಿವೆ.

ಕೆಜಿಎಫ್ 2′ ಚಿತ್ರ 50 ದಿನದತ್ತ ಓಟ ಮುಂದುವರೆಸಿದೆ. ಸದ್ಯ 1229 ಕೋಟಿ ಕಲೆ ಹಾಕಿರುವ ‘ಕೆಜಿಎಫ್ 2’ದ ಗಳಿಕೆ ಮತ್ತಷ್ಟು ಹೆಚ್ಚು ಆಗುವ ಸಾಧ್ಯತೆ ಇದೆ. ಈ ಚಿತ್ರದ ಕ್ಲೋಸಿಂಗ್ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಕುತೂಹಲ ಸಾಕಷ್ಟು ಜನರಿಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರ ಹಲವು ದಾಖಲೆ ಬರೆದಿದೆ. ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರವೊಂದು ಗುರುತು ಮೂಡಿಸುವಲ್ಲಿ ಈ ಚಿತ್ರ ಕಾರಣ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!