‘ಕೆಜಿಎಫ್ 2′ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಲೆವೆಲ್‌ಗೆ ಸೀಮಿತಗೊಳಿಸಲು ಮನಸ್ಸಿಲ್ಲ ಎಂದು ನಾಯಕ ನಟ ಯಶ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಯಶ್, ” ವಿಶ್ವ ಮಟ್ಟದಲ್ಲಿ ಸಿನಿಮಾ ಕೊಂಡೊಯ್ಯಲು ದಾರಿಗಳಿವೆ. ಅದನ್ನು ನಾವು ಕಂಡುಕೊಳ್ಳಬೇಕಷ್ಟೇ. ಈ ನಿಟ್ಟಿನಲ್ಲಿ ಈ ಸಿನಿಮಾ ನಮ್ಮ ಮೊದಲ ಹೆಜ್ಜೆ ಅನ್ನಬಹುದು. ಸಿನಿಮಾ ಜಗತ್ತಿನಲ್ಲಿ ಪ್ರೆಶರ್ ಅನ್ನೋದು ಯಾವಾಗಲೂ ಇರುತ್ತೆ. ಒತ್ತಡದಲ್ಲೇ ಖುಷಿ ಕಾಣುವ ಜನ ನಾವು. ಗೆಲುವಿಗಾಗಿ ನಮ್ಮ ಹೋರಾಟ ಸದಾ ಜೀವಂತವಾಗಿರುತ್ತದೆ’ ಎಂದಿದ್ದಾರೆ.
“ಸಿನಿಮಾದ ಟೀಸರ್, ಟ್ರೈಲರ್ ಇತ್ಯಾದಿ ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇವೆ. ಈಗಲೇ ಅದನ್ನೆಲ್ಲ ರಿಲೀಸ್ ಮಾಡೋದು ತುಂಬಾ ಬೇಗ ಆಗುತ್ತೆ. ಈ ಸಿನಿಮಾ ಮೂಲಕ ನಾವು ಗರಿಷ್ಠ ಜನರನ್ನು ತಲುಪಬೇಕು. ಅದು ನಮ್ಮ ಗುರಿ. ನಾವು ಉತ್ತಮ ಕಂಟೆಂಟ್ ಕೊಡುತ್ತೇವೆ ಅನ್ನುವ ಕಾರಣಕ್ಕೋಸ್ಕರ ಜನ ನಮ್ಮ ಸಿನಿಮಾಗಾಗಿ ಕಾಯ್ತಿದ್ದಾರೆ ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾವು ಈಗಲೂ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಮಾಡುತ್ತೇವೆ ಅನ್ನುವ ಮಾತಿಗೆ ಬದ್ಧರಾಗಿದ್ದೇವೆ. ಈಗಿನ್ನೂ ಜನವರಿಯಲ್ಲಿದ್ದೇವೆ, ಏಪ್ರಿಲ್ ಹೊತ್ತಿಗೆ ಕೋವಿಡ್ ಕೇಸ್‌ಗಳೆಲ್ಲ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸುವ ವಿಶ್ವಾಸ ಇದೆ ” ಎಂದು ಅವರು ಹೇಳಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರದಲ್ಲಿ ಪ್ರಕಾಶ್ ರಾಜ್, ತೆಲುಗು ನಟ ರಾವ್ ರಮೇಶ್, ಹಿಂದಿ ನಟ ಸಂಜಯ್ ದತ್ ಆಕರ್ಷಣೆಯಾಗಿದ್ದಾರೆ. ಖಳ ನಾಯಕ ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಮೀಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯಿಸಿದ್ದಾರೆ. ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಅವರ ಶೂಟಿಂಗ್ ಈಗಾಗಲೇ ಮುಗಿದಿದೆ.
‘ಕೆಜಿಎಫ್ 2’ ಚಿತ್ರಕ್ಕೆ ರವಿ ಬಸ್ರೂರ್ ಸಂಗಿತ ಸಂಯೋಜನೆ ಮಾಡಿದ್ದಾರೆ.
___

Be the first to comment