ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಪ್ರಚಾರ ಕಾರ್ಯ ಜನವರಿಯಲ್ಲಿ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ.
ಜನವರಿಯಲ್ಲಿ ನಾಯಕ ನಟ ಯಶ್ ಹುಟ್ಟು ಹಬ್ಬ ಇದೆ. ಈ ದಿನ ಮೇಕಿಂಗ್ ವಿಡಿಯೋವೊಂದನ್ನು ಹೊರತರಲು ಚಿತ್ರತಂಡ ತಯಾರಿ ನಡೆಸಿದೆ. ಕೆಜಿಎಫ್ 2 ಚಿತ್ರ 2022ರ ಏಪ್ರಿಲ್ 14ಕ್ಕೆ ತೆರೆ ಕಾಣಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ.
ಜನವರಿ ಮೂರನೇ ವಾರದಿಂದ ಸಿನಿಮಾದ ಪ್ರಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸಂಜಯ್ ದತ್ ಅವರು ಡಬ್ಬಿಂಗ್ ಮುಗಿಸಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
2021ರ ಜುಲೈ 16 ಕ್ಕೆ ಕೆಜಿಎಫ್ 2 ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕೊರೋನಾದಿಂದ ಇದು ಸಾಧ್ಯವಾಗಿರಲಿಲ್ಲ. ಕೆಜಿಎಫ್ 2 ಸಿನಿಮಾದ ಪ್ಯಾಚ್ ವರ್ಕ್ ಕೆಲಸ ಬಾಕಿ ಇದ್ದು, ಬೆಂಗಳೂರಿನ ನೈಸ್ ರೋಡ್‌ನಲ್ಲಿ ಮೂರು ದಿನದ ಶೂಟಿಂಗ್ ಕೆಲಸ ನಡೆಯಲಿದೆ ಎಂದು ಹೇಳಲಾಗಿದೆ. ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ.
___






Be the first to comment