ವಿಜಯ್ ಕಿರಗಂದೂರು ನಿರ್ಮಾಣದ ಬ್ಲಾಕ್ ಬಸ್ಟರ್ ಚಿತ್ರ ‘ಕೆಜಿಎಫ್ 2’ ಮೇ 27ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರ ಆಗಲಿದೆ.
ಒಂದೇ ವಾರದಲ್ಲಿ 800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ‘ಕೆಜಿಎಫ್ 2’ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಲು ಆಗದವರು ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಆನಂದಿಸಬಹುದಾಗಿದೆ.
ಕಳೆದ ಒಂದು ವಾರದಲ್ಲಿ ದಕ್ಷಿಣ ಭಾರತದಲ್ಲಿ 1.5 ಕೋಟಿಗೂ ಅಧಿಕ ಜನ ಈ ಚಿತ್ರ ವೀಕ್ಷಿಸಿದ್ದಾರೆ. ಉತ್ತರ ಭಾರತದಲ್ಲಿ 1.7 ಕೋಟಿ ಜನ ‘ಕೆಜಿಎಫ್ 2’ ವೀಕ್ಷಿಸಿದ್ದಾರೆ.40 ಲಕ್ಷಕ್ಕೂ ಅಧಿಕ ಜನ ಕರ್ನಾಟಕದಲ್ಲಿ, 30 ಲಕ್ಷ ಜನ ತಮಿಳ್ನಾಡು, 50 ಲಕ್ಷಕ್ಕೂ ಅಧಿಕ ಜನ ಆಂಧ್ರ, ತೆಲಂಗಾಣದಲ್ಲಿ ಚಿತ್ರ ವೀಕ್ಷಿಸಿದ್ದಾರೆ.
25 ಲಕ್ಷದಷ್ಟು ಕೇರಳದಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಒಂದು ವಾರದಲ್ಲಿ ಹಿಂದಿ ವರ್ಶನ್‌ನಲ್ಲಿ ಅತ್ಯಧಿಕ 270 ಕೋಟಿ ರೂಪಾಯಿ ಗಳಿಕೆಯಾಗಿದೆ. ತಮಿಳು ನಾಡಿನಲ್ಲಿ ‘ಕೆಜಿಎಫ್ 2’ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ವಾರ 150 ಥಿಯೇಟರ್‌ಗಳು ಹೆಚ್ಚುವರಿಯಾಗಿ ಚಿತ್ರ ಪ್ರದರ್ಶನಕ್ಕೆ ಸೇರಿಕೊಂಡಿವೆ.
ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
___

Be the first to comment