ಸೆನ್ಸಾರ್ ಮಂಡಳಿಯಿಂದ ಕೆಜಿಎಫ್ 2ಗೆ ಯು/ಎ ಸರ್ಟಿಫಿಕೇಟ್

ಕೆಜಿಎಫ್ ಚಾಪ್ಟರ್ 2 ಚಿತ್ರ ಇದೇ ಎಪ್ರಿಲ್‌ 14ರಿಂದ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯಿಂದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು  ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

ಈ ಹಿಂದೆ ತೆರೆಕಂಡ ಹಿಂದಿ ಹಾಗೂ ಬಾಕ್ಸ್ ಆಫೀಸ್‌ನಲ್ಲೂ ಸುದ್ದಿ ಮಾಡಿರುವ ಚಿತ್ರಗಳ ದಾಖಲೆ ಮುರಿದು ಹಾಕುವ ಬಹು ನಿರೀಕ್ಷೆಯಲ್ಲಿರುವ ಕೆಜಿಎಫ್ ಚಾಪ್ಟರ್ 2 ತಂಡಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ ದೊರೆತಿರುವುದು ಚಿತ್ರ ತಂಡಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸೆನ್ಸಾರ್ ಮಂಡಳಿಯು ಕೆಜಿಎಫ್ ಚಾಪ್ಟರ್ 2ಗೆ ಪ್ರಮಾಣ ಪತ್ರ ನೀಡಿರುವ ಪ್ರಮಾಣ ಪತ್ರವು ಸೊಸಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವು  ಎರಡು ಗಂಟೆ 48 ನಿಮಿಷ 6 ಸೆಕೆಂಡಗಳ ಕಾಲ (ಒಟ್ಟು 168 ನಿಮಿಷಗಳ ಕಾಲ) ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ.

12 ವರ್ಷ ಮೇಲ್ಪಟ್ಟ ಮಕ್ಕಳು ಕೂಡಾ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಣೆ ಅವಕಾಶವಿದೆ ಎಂದು ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ.

ಇನ್ನು ಈ ಹಿಂದೆ ತೆರೆ ಕಂಡು ಹೊಸ ದಾಖಲೆ ನಿರ್ಮಿಸಿದದ್ದ ಕೆಜಿಎಫ್ ಚಾಪ್ಟರ್ 1 ಅಭಿಮಾನಿಗಳ ಬೇಡಿಕೆಯ ಹಿನ್ನೆಲೆ ಚಿತ್ರತಂಡ ಮತ್ತೆ ಕೆಜಿಎಫ್ 1 ಬಿಡುಗಡೆ ಮಾಡಲು ಆಯ್ದ ಸಿನಿಮಾ ಚಿತ್ರಮಂದಿರಗಳನ್ನು ಬುಕ್ ಮಾಡಿಕೊಂಡಿದ್ದು, ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಮುಂಚಿತವಾಗಿ ಚಿತ್ರದ ನಿರ್ಮಾಪಕರು ಸಬ್ಸಿಡಿ ದರದಲ್ಲಿ ದೇಶದಾದ್ಯಂತ ಆಯ್ದ ಪರದೆಗಳಲ್ಲಿ ಮೊದಲ ಭಾಗವನ್ನು ಮರು-ಬಿಡುಗಡೆ ಮಾಡಲು ಯೋಜಿಸಿದ್ದಾರೆ.

ಚಿತ್ರವು ಏಪ್ರಿಲ್ 8 ರಂದು ಪ್ರದರ್ಶನವಾಗಲಿದೆ.  ಕೆಜಿಎಫ್ ಅಧ್ಯಾಯ 2 ಬಿಡುಗಡೆಗೆ ಕೇವಲ ಒಂದೇ ಒಂದು ದಿನ ಮುಂಚಿತವಾಗಿ ಎಪ್ರಿಲ್ 13ರವರಿಗೆ ಕೆಜಿಎಫ್ ಮೊದಲ ಆಧ್ಯಾಯ ಪ್ರದರ್ಶನ ಕಾಣಲಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!