ಕೆಜಿಎಫ್ 2 ಬಿಡುಗಡೆ ದಿನಾಂಕ ಘೋಷಣೆಗೆ ಒತ್ತಾಯ

ಬೆಂಗಳೂರು : ಬಹುನಿರೀಕ್ಷಿತ ಕೆಜಿಎಫ್-2′ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗದೆ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚಿತ್ರ ತಂಡ ಈ ಹಿಂದೆ ಘೋಷಣೆ ಮಾಡಿದಂತೆ ಜುಲೈ 16ರಂದು ಚಿತ್ರ ಬಿಡುಗಡೆಯಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಚಿತ್ರತಂಡ ಹೇಳಿದ್ದ ಎರಡು ದಿನಾಂಕಗಳು ರದ್ದಾಗಿವೆ. ಈ ನಡುವೆ ಹೊಸದಾಗಿ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟುಹಿಡಿದಿದ್ದಾರೆ. ಚಿತ್ರದ ಬಗ್ಗೆ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಕೆಜಿಎಫ್ ತಂಡ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ.
ಚಿತ್ರ ಅಕ್ಟೋಬರ್ ಅಥವಾ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರ ತಂಡ ನೀಡಬೇಕಿದೆ.

ಕೆಜಿಎಫ್ 2 ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ನಟನೆ ಮಾಡುತ್ತಿದ್ದಾರೆ. ಇದು ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಲು ಕಾರಣವಾಗಿದೆ.
ಚಿತ್ರದ ನಾಯಕ ನಟ ಯಶ್ ಜನ್ಮದಿನವಾದ ಜನವರಿ 8ರಂದು ಚಿತ್ರತಂಡವು ಟೀಸರ್ ಬಿಡುಗಡೆ ಮಾಡಿತ್ತು. ಇದು ವಿಶ್ವದಲ್ಲೇ ಅತ್ಯಂತ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಎನ್ನುವ ಖ್ಯಾತಿ ಪಡೆದಿತ್ತು. ಈಗ ಕೆಜಿಎಫ್ 2 ಟೀಸರ್ 20ಕೋಟಿ ಜನರು ವೀಕ್ಷಣೆ ಮಾಡಿದ ದಾಖಲೆಯ ಸಮೀಪ ತಲುಪಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!