ರಾಕಿ ಭಾಯ್ ಎಂಟ್ರಿಗೆ ಡೇಟ್​​ ಫಿಕ್ಸ್!

ಕೆಜಿಎಫ್, ಕನ್ನಡ ಚಿತ್ರರಂಗ ಅಲ್ಲದೇ ಇಡೀ ದೇಶದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ಎರಡು ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ ‘ಕೆಜಿಎಫ್’ ಸಿಕ್ವೇಲ್ ಎರಡಕ್ಕೋಸ್ಕರ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ‌.

ಕಳೆದ ತಿಂಗಳು ಕೆಜಿಎಫ್​​ ಚಿತ್ರತಂಡ, ರಾಕಿ ಬಾಯ್ ಹುಟ್ಟು ಹಬ್ಬಕ್ಕೆ ಒಂದು ಸರ್ ಪ್ರೈಸ್ ಇದೆ ಅಂತಾ ಹೇಳಿತ್ತು. ಆದ್ರೀಗ ಕೊನೆಗೂ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದು, ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ‘ಕೆಜಿಎಫ್ ಚಾಪ್ಟರ್-2’ ಟೀಸರ್ ಬಿಡುಗಡೆ ದಿನಾಂಕ ಹಾಗೂ ಡೇಟ್ ಅನೌನ್ಸ್ ಮಾಡಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಇಂಗ್ಲಿಷ್, ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್​ನ ಬ್ಲ್ಯಾಕ್ ಅಂಡ್ ವೈಟ್ ಶೈಲಿಯಲ್ಲಿ ಮುದ್ರಣ ಮಾಡಿ ಪ್ರಚಾರ ಮಾಡಲಾಗಿದೆ. ಈಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಿನ, ಸಮಯವನ್ನ ಈ ಬ್ಲ್ಯಾಕ್ ಅಂಡ್ ವೈಟ್ ಕಾಲದ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದ್ದು ಹೊಸತನಕ್ಕೆ ಸಾಕ್ಷಿಯಾಗಿದೆ.

ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಚಾರ ಮೊದಲು ಅನಿಸುತ್ತೆ. ಪ್ರಶಾಂತ್ ನೀಲ್ ನಿರ್ದೇಶನವಿರುವ ಈ ಚಿತ್ರವನ್ನ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. 2021 ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!