ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ರಾಕಿ ಬಾಯ್ ಕೊಡಲಿದ್ದಾರೆ ಗುಡ್​ನ್ಯೂಸ್!!

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದ ಸಿನಿಮಾ ಕೆಜಿಎಫ್. ಎರಡು ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ ಕೆಜಿಎಫ್ ಸಿನಿಮಾದ ಸಿಕ್ವೇಲ್​​ಗೋಸ್ಕರ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಕಳೆದ ತಿಂಗಳು ಕೆಜಿಎಫ್​​ ಚಿತ್ರತಂಡ, ರಾಕಿ ಬಾಯ್ ಹುಟ್ಟು ಹಬ್ಬಕ್ಕೆ ಒಂದು ಸರ್​ಪ್ರೈಸ್ ಇದೆ ಅಂತಾ ಹೇಳಿತ್ತು. ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ದಿನಾಂಕ ಹಾಗೂ ಡೇಟ್‌ನ ಅನೌನ್ಸ್​ ಮಾಡಲಾಗಿದೆ. ಇದು ಯಶ್ ಫ್ಯಾನ್ಸ್‌ ಖುಷಿ ಹೆಚ್ಚಿಸಿದೆ.

ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್​​ ಸೀಕ್ವೆಲ್ ಟೀಸರ್ 2021ರ ಜನವರಿ 8ಕ್ಕೆ ಬಿಡುಗಡೆಯಾಗಲಿದೆ. ಅವತ್ತು ಯಶ್ ಹುಟ್ಟುಹಬ್ಬದ ದಿನ. ಅಂದು ಬೆಳಗ್ಗೆ 10.18ಕ್ಕೆ ಟೀಸರ್‌ ಬಿಡುಗಡೆಯಾಗಲಿದೆ. ಸದ್ಯ ಕೆಜಿಎಫ್ ಚಿತ್ರದ ಕೆಲ ಫೋಟೋಗಳನ್ನ ಚಿತ್ರತಂಡ ಹಂಚಿಕೊಂಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಹೊಸ ವರ್ಷ ಯಶ್ ಹುಟ್ಟು ಹಬ್ಬದಂದು ಟೀಸರ್ ರಿಲೀಸ್ ಆಗುತ್ತಿದೆ. ಯಶ್ ಅಭಿಮಾನಿಗಳಲ್ಲಿ ಇದು ಕುತೂಹಲ ಹುಟ್ಟಿಸಿದೆ‌. ಹೊಂಬಾಳೆ ಫಿಲಮ್ಸ್​ ಬ್ಯಾನರ್​ ಅಡಿ ವಿಜಯ್ ಕಿರಗಂದೂರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. 2021ರ ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!