ಕೆಜಿಎಫ್-2 ಚಿತ್ರೀಕರಣಕ್ಕೆ ತಡೆಯಾಜ್ಞೆ

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣಕ್ಕೆ ಕೋಲಾರ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಚಿತ್ರೀಕರಣದಿಂದ ಸ್ಥಳೀಯ ಆಸ್ತಿಪಾಸ್ತಿ ಹಾನಿಯಾಗುತ್ತಿದೆ ಎಂಬ ಆರೋಪ ಮಾಡಿ ಶ್ರೀನಿವಾಸ್ ಎಂಬುವರು ಕೋರ್ಟ್ ಮೊರೆಹೋಗಿದ್ದಾರೆ.

ಕೆಜಿಎಫ್ ನ ಸೈನೈಡ್ ಗುಡ್ಡದ ಮೇಲೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮಾಡಲಾಗುತ್ತಿದ್ದು, ಗುಡ್ದದ ಮೇಲೆ ಬೃಹತ್ ಪ್ರಮಾಣದ ಸೆಟ್ ಹಾಕಲಾಗಿದೆ. ಇದರಿಂದ ಗಿಡ-ಮರಗಳನ್ನು ನಾಶ ಮಾಡಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

ಶ್ರೀನಿವಾಸ್ ಅವರ ದೂರನ್ನ ಪರಿಗಣಿಸಿದ ಕೋಲಾರ ಸಿಟಿ ಸಿವಿಲ್ ಕೋರ್ಟ್, ಕೆಜಿಎಫ್ ನಿರ್ಮಾಪಕರಿಗೆ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೂ ಚಿತ್ರೀಕರಣ ಆರಂಭಿಸದಂತೆ ಆದೇಶಿಸಿದೆ.

This Article Has 3 Comments
  1. Pingback: check my reference

  2. Pingback: binance video

  3. Pingback: คาสิโน

Leave a Reply

Your email address will not be published. Required fields are marked *

Translate »
error: Content is protected !!