‘ಕೆರೆಬೇಟೆ’ ಚಿತ್ರದ ಮುಹೂರ್ತ ಇತ್ತೀಚೆಗೆ ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ನೆರವೇರಿತು.
‘ರಾಜಹಂಸ’ ಚಿತ್ರದ ನಂತರ ಗೌರಿಶಂಕರ್ ಅಭಿನಯದ ಹೊಸ ಚಿತ್ರ ಇದಾಗಿದೆ.
‘ಕೆರೆಬೇಟೆ’ ಚಿತ್ರದಲ್ಲಿ ಹಳ್ಳಿ ಸೊಗಡಿನ ನೈಜತೆಯನ್ನು ನಾವು ಕಾಣಬಹುದು. ಇದೊಂದು ಅದ್ಭುತ ಪ್ರೇಮ ಕಥೆಯಾಗಿರುತ್ತೆ. ‘ಕೆರೆಬೇಟೆ’ ಅನ್ನೋದು ಕೆರೆ ಬತ್ತಿದಾಗ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ನೀರು ಬತ್ತಿದ ಸಮಯದಲ್ಲಿಯೇ ಮೀನು ಹಿಡಿಯೋದನ್ನೇ ಇಲ್ಲಿ ‘ಕೆರೆಬೇಟೆ’ ಅಂತ ಕರೆಯುತ್ತಾರೆ. ಇದರ ಸುತ್ತ ಸಿನಿಮಾ ಇರುತ್ತದೆ.
‘ಕೆರೆಬೇಟೆ’ ಸಿನಿಮಾದ ಡೈಲಾಗ್‍ಗಳನ್ನು ಸ್ವತಃ ಗೌರಿಶಂಕರ್ ಬರೆದಿದ್ದಾರೆ. ಗುರುಶಿವ ಹಿತೈಷಿ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ದೇಶನವನ್ನು ಸಹ ಅವರೇ ಮಾಡುತ್ತಿದ್ದಾರೆ. ನಾಯಕ ನಟ ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಸಿನಿಮಾದ ಕಥೆ 2003- 2004ರ ಕಾಲಘಟ್ಟದಲ್ಲಿ ನಡೆಯುತ್ತದೆ. ಈ ಸಿನಿಮಾವನ್ನು ಹೆಚ್ಚು ಕಡಿಮೆ 80ರಿಂದ 90 ದಿನ ಚಿತ್ರೀಕರಿಸುವ ಪ್ಲಾನ್ ಮಾಡಲಾಗಿದೆ.
ಗಗನ್ ಬಡೇರಿಯಾ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.
____
Be the first to comment