‘ಕೆಂಡದ ಸೆರಗು’ ಕುಸ್ತಿ ಆಧಾರಿತ ಸಿನಿಮಾದಲ್ಲಿ ಪೊಲೀಸ್ ಕಮಿಷನರ್ ಆಗಿ ಮಾಲಾಶ್ರೀ ನಟಿಸಲಿದ್ದಾರೆ.
ಸಂಭಾಷಣೆ ಬರಹಗಾರರಾಗಿ ಮತ್ತು ಗೀತರಚನೆಕಾರರಾಗಿ ಕೆಲಸ ಮಾಡಿರುವ ರಾಕಿ ಸೋಮ್ಲಿ, ಕನಸಿನ ರಾಣಿ ಮಾಲಾಶ್ರೀ ಅವರ ಮುಂದಿನ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಕೆಂಡದ ಸೆರಗು ಟೈಟಲ್ ಇರುವ ಈ ಚಿತ್ರ ರಾಕಿ ಅವರ ಸ್ವಂತ ಕಾದಂಬರಿ ಆಧರಿಸಿದ ಕತೆಯಾಗಿದೆ. ಈ ಚಿತ್ರದಲ್ಲಿ ಕುಸ್ತಿಯೇ ಹೈಲೈಟ್. ಶ್ರೀ ಮುತ್ತು ಟಾಕೀಸ್ ಮತ್ತು ಎಸ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿಪಟುವಾಗಿ ನಟಿಸಿದ್ದಾರೆ.
ಸಿಂಧು ಲೋಕನಾಥ್ ಲೇಖಕಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಚಿತ್ರದಲ್ಲಿ ಯಶ್ ಶೆಟ್ಟಿ, ವರದನ್, ಶೋಭಿತಾ, ಪ್ರತಿಮಾ, ಬಸು ಹಿರೇಮಠ್ ಮತ್ತು ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವೀರೇಶ್ ಖಂಬ್ಳಿ ಅವರ ಸಂಗೀತ, ವಿಪಿನ್ ವಿ ರಾಜ್ ಅವರ ಛಾಯಾಗ್ರಹಣವಿದೆ. ಕೆಂಡದ ಸೆರಗು ಚಿತ್ರೀಕರಣ ಪೂರ್ಣವಾಗಿ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.
ಚಿತ್ರದ ಟೀಸರ್ ಜನವರಿ 23 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಚಿತ್ರವನ್ನು ಮಾರ್ಚ್ ನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ.
___

Be the first to comment