ಕೆಡಿ ಆಗಸ್ಟ್‌ನಲ್ಲಿ ಬಿಡುಗಡೆ

ಪ್ರೇಮ್ ಅವರ ‘ಕೆಡಿ’ ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಬಹುಭಾಷಾ ಚಿತ್ರ ‘ಕೆಡಿ’ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ವಿಳಂಬವಾಗಿದೆ.  ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೆ ತಡ ಮಾಡುವುದಿಲ್ಲ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.

”ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ‘ಸೆಟ್ಟಾಗಲ್ಲ ಹೋಗೆ ನಂಗು ನಿಂಗು’ ಹಾಡಿನ ಅಂತಿಮ ದೃಶ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಚಿತ್ರೀಕರಣ ಪೂರ್ಣಗೊಂಡಿದೆ’  ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್,  ಬಾಲಿವುಡ್ ತಾರೆಯರಾದ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ನಟಿಸಿರುವ ಕೆಡಿ ಚಿತ್ರ   70 ಮತ್ತು 80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿದೆ.

ಚಿತ್ರದ ಮೊದಲ ಹಾಡು ‘ಶಿವ ಶಿವ’ ಈಗಾಗಲೇ ಭರ್ಜರಿ ವೀಕ್ಷಣೆಗಳನ್ನು ಪಡೆದಿದೆ. ‘ಸೆಟ್ಟಾಗಲ್ಲ ಹೋಗೆ…’ ಹಾಡು   ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ನಿರ್ದೇಶಕ ಪ್ರೇಮ್  ಹಾಡಿನ ಹುಕ್ ಸ್ಟೆಪ್‌ಗಳನ್ನು ಆಯ್ಕೆ ಮಾಡಲು ಪ್ರೇಕ್ಷಕರಿಗೆ ಅವಕಾಶ ನೀಡಿದ್ದಾರೆ. ಅತ್ಯುತ್ತಮವಾದದ್ದನ್ನು ಅಧಿಕೃತ ಮ್ಯೂಸಿಕ್ ವಿಡಿಯೋದಲ್ಲಿ ಸೇರಿಸಲಾಗುವುದು. ಇದನ್ನು ಆಮ್ಸ್ಟರ್‌ಡ್ಯಾಮ್‌ನಲ್ಲಿ ಚಿತ್ರೀಕರಿಸಲಾಗುವುದು.

ಯಶ್ ಅಭಿನಯದ ಟಾಕ್ಸಿಕ್ ಮತ್ತು ವಿಜಯ್ ಅಭಿನಯದ ಜನ ನಾಯಗನ್  ಗೆ ಬಂಡವಾಳ ಹೂಡಿರುವ ನಿರ್ಮಾಪಕ ವೆಂಕಟ್ ನಾರಾಯಣ್  ಕೆಡಿಗೆ ಬೆಂಬಲ ನೀಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!