ಸುಮಾರು 15 ವರ್ಷಗಳ ನಂತರ ನಟ ಶಿವಣ್ಣ ಅಭಿನಯಿಸುತ್ತಿರುವ ರೀಮೇಕ್ ಚಿತ್ರವಾದ ಕವಚ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇದು ಮಲಯಾಳಂನ “ಒಪ್ಪಂ’ ಚಿತ್ರದ ರೀಮೇಕಾಗಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿರುವ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇದೀಗ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ನಟಿಸುತ್ತಿದ್ದು ಈ ಚಿತ್ರವನ್ನು ಎಚ್.ಎಂ.ಎ ಸಿನಿಮಾನಡಿ ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್ ಕುಮಾರ್ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಶಿವರಾಜಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ನಟಿಸುತ್ತಿದ್ದು, ಅವರ ಜೊತೆಗೆ ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ನಟಿಸುತ್ತಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.ಟಗರು ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಜನತೆಗೆ, ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನೋಡಲು ಜನರು ಕಾತರರಾಗಿದ್ದಾರೆ. ಶಿವಣ್ಣ ಅವರ ಮುಂದಿನ ಚಿತ್ರ ಕವಚದಲ್ಲಿ ಇನ್ನೂ ವಿಶಿಷ್ಟ ಪಾತ್ರವನ್ನು ನೋಡಬಹುದಾಗಿದ್ದು ಕವಚ ಚಿತ್ರದ ವಿಶಿಷ್ಠ ಗೆಟಪ್ ಮೂಲಕ ಹೇಗೆ ಕಮಾಲ್ ಮಾಡ್ತಾರೋ ನೋಡ್ಬೇಕು.

Pingback: Unicc
Pingback: agile and DevOps services
Pingback: my response