ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ ಮತ್ತು ಮಿಲನಾ ನಾಗರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ʼಕೌಸಲ್ಯ ಸುಪ್ರಜಾ ರಾಮʼ ಸಿನಿಮಾ ತೆಲುಗಿನ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲಿದೆ.
ಸಿನಿಮಾದ ತೆಲುಗು ವರ್ಷನ್ ETV Win OTT ಯಲ್ಲಿ ಸ್ಟ್ರೀಮ್ ಆಗಲಿದೆ. ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ. ಇದೇ ಶೀರ್ಷಿಕೆಯಲ್ಲಿ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.
‘ಸಿನಿಮಾದ ಕಂಟೆಂಟ್ ಇಷ್ಟಪಟ್ಟು ತೆಲುಗಿಗೆ ಡಬ್ಬಿಂಗ್ ರೈಟ್ಸ್ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಸಿನಿಮಾ ತೆಲುಗು ಪ್ರೇಕ್ಷಕರು ನೋಡುತ್ತಾರೆ ಎಂಬ ಖುಷಿ ಇದೆ” ಎಂದು ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.
ʼಕೌಸಲ್ಯ ಸುಪ್ರಜಾ ರಾಮʼ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟಿಸಿರುವ ಆರನೇ ಚಿತ್ರ. ಚಿತ್ರದಲ್ಲಿ ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
2023ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ ‘ಕೌಸಲ್ಯ ಸುಪ್ರಜಾ ರಾಮ’ ಹಿಟ್ ಆಗಿತ್ತು. ಈ ಚಿತ್ರ 15 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ. ಸಿನಿಮಾ ಕನ್ನಡದಲ್ಲಿ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

Be the first to comment