“ಕತ್ಲೆಕಾಡು’ ಚಿತ್ರ ಈ ವಾರ ಬಿಡುಗಡೆ

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಕತ್ಲೆಕಾಡು’ ಚಿತ್ರದ ಹಾಡುಗಳು ಮತ್ತು ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. “ಕತ್ಲೆ ಕಾಡು’ಈ ವಾರ ಬಿಡುಗಡೆಯಾಗುತ್ತಿದೆ.

ನಿಯಜುದ್ದೀನ್‌ ನಿರ್ಮಾಣದ “ಕತ್ಲೆಕಾಡು’ಕನ್ನಡ ಚಿತ್ರಕ್ಕೆ ರಾಜು ದೇವಸಂದ್ರಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಶಿವಾಜಿನಗರ ಲಾಲ್‌ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಸಿಂಧು ರಾವ್‌, ಸಿಂಚನಾ, ಸಂಜನಾ ನಾಯ್ಡು, ಸಂಜೀವ್‌ಕುಮಾರ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರಾವ್‌ ರಿಶಿಕ್‌ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜ್‌ ಭಾಸ್ಕರ್‌ ಹಿನ್ನಲೆ ಸಂಗೀತ ಮತ್ತು ರಮೇಶ್‌ಕೋಯಿರ ಛಾಯಾಗ್ರಹಣವಿದೆ. “ಕತ್ಲೆಕಾಡು’ ಚಿತ್ರದ ಶೀರ್ಷಿಕೆಗೆ “ನೋ ಒನ್‌ಕ್ಯಾನ್‌ ಎಸ್ಕೆಪ್‌’ ಅಡಿ ಬರಹವಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಕಾಡಿನಲ್ಲಿ ಮಾಡಲಾಗಿದೆ. “ಕತ್ಲೆ ಕಾಡಿ’ಗೆ ಹೋದವರು ಯಾಕೆ ಹೊರ ಬರಲಾರರು ಎಂಬ ಕುತೂಹಲದ ಸಂಗತಿಗಳ ಸುತ್ತ ಚಿತ್ರ ನಡೆಯಲಿದೆಯಂತೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!