‘ಕತ್ಲೆ ಕಾಡು’ ಚಿತ್ರದ ಧ್ವನಿ ಸುರುಳಿ ಬಿಡುಗಡೆ

‘ಕತ್ಲೆ ಕಾಡು’ ಕನ್ನಡ ಹಾಗೂ ಹಿಂದಿಯಲ್ಲಿ ‘ಕಾಲ ಜಂಗಲ್’ ಸಿನಿಮಾದ ಧ್ವನಿ ಸಾಂದ್ರಿಕೆ ಹಾಡು ಟಿಸರ್ ಬಿಡುಗಡೆ ಸಮಾರಂಭ ವಿಜೃಂಭಣೆ ಇಂದ ಗಾಯತ್ರಿ ವಿಹಾರ ಪ್ಯಾಲೆಸ್ ಅಲ್ಲಿ ಸೋಮವಾರ ಮಧ್ಯನ್ಹಾ ಬಿಡುಗಡೆ ಮಾಡಲಾಗಿದೆ.

ಸಾಗರ್ ಕ್ಯಾಟರರ್ ಸಂಸ್ಥೆಯ ಪಂಕಜ್ ಕೊಠಾರಿ ಟೀಸರ್ ಬಿಡುಗಡೆ ಮಾಡಿದರು ಸಿರಿ ಮ್ಯೂಸಿಕ್ ಸಂಸ್ಥೆಯಿಂದ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ‘ಕಾಲ ಜಂಗಲ್’ ಹಿಂದಿ ಭಾಷೆಯ ಸಿನಿಮಾದ ಟೀಸರ್ ಸಹ ಇದೆ ಸಮಯದಲ್ಲಿ ಅನಾವರಣ ಮಾಡಲಾಯಿತು. ಇದೆ ಸಮಯದಲ್ಲಿ ಮತ್ತೊಂದು ಹಿಂದಿ ಸಿನಿಮಾ ಶಕ್ತಿ ಕಪೂರ್ ಅಭಿನಯದ ‘ಲೇನೆ ಕೆ ದೇನೆ’ ಹಾಸ್ಯಮಯ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಲಾಯಿತು.

ನಿಯಜುದ್ದೀನ್ ನಿರ್ಮಾಣದ ‘ಕತ್ಲೆ ಕಾಡು’ ಕನ್ನಡ ಸಿನಿಮಾಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವವರು ರಾಜು ದೇವಸಂದ್ರ. ಆರಾವ್ ರಿಶಿಕ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ರಮೇಶ್ ಕೋಯಿರ ಛಾಯಾಗ್ರಹಣ ಮಾಡಿದ್ದಾರೆ. ರಾಜ್ ಭಾಸ್ಕರ್ ಈ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ಒದಗಿಸಿದ್ದಾರೆ.

ಶಿವಾಜಿನಗರ ಲಾಲ್ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಸಿಂಧು ರಾವ್, ಸಿಂಚನ, ಸಂಜನ ನಾಯ್ಡು, ಸಂಜೀವ್ ಕುಮಾರ್ ಹಾಗೂ ಇನ್ನಿತರರು ತಾರಗಣದಲ್ಲಿದ್ದಾರೆ.  ಈ ಹಿಂದೆ ಅಕ್ಷತೆ ಹಾಗೂ ಗೂಸಿ ಗ್ಯಾಂಗ್ ಸಿನಿಮಾ ನಿರ್ದೇಶನ ಮಾಡಿದ ಅನುಭವ ಉಳ್ಳ ನಿರ್ದೇಶಕ ರಾಜು ದೇವಸಂದ್ರ ಈ ಬಾರಿ ಪ್ರಕೃತಿ ಬಗ್ಗೆ ಕಾಳಜಿ ಇಟ್ಟು ಕಾಲ್ಪನಿಕ ಕಥೆ ರಚಿಸಿದ್ದಾರೆ. ಈ ಕತ್ಲೆ ಕಾಡು ನೋ ಒನ್ ಕ್ಯಾನ್ ಎಸ್ಕೆಪ್ ಅಡಿ ಬರಹ ಇರುವ ಚಿತ್ರ ಬಹುತೇಕ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಕತ್ಲೆ ಕಾಡಿಗೆ ಹೋದವರು ಯಾಕೆ ಆಚೆ ಬಾರೊಲ್ಲ ಎಂಬ ಕುತೂಹಲ ಸಹ ಅಡಗಿದೆ ಚಿತ್ರಕತೆಯಲ್ಲಿ. ಮೂಡ ನಂಭಿಕೆ ಸಹ ಚಿತ್ರದಲ್ಲಿ ಅಡಕವಾಗಿದೆ. ಶಿವಾಜಿನಗರ ಲಾಲ್ ಮೊದಲ ಸಿನಿಮಾದಲ್ಲಿ ನಾಯಕ ಆಗಿ ಶ್ರಮ ವಹಿಸಿ ಅಭಿನಯಿಸಿದ್ದಾರೆ.

ಅವರು ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸಿದ್ದರು. ಗಾಯಕರು ಆದ ನಿರ್ಮಾಪಕ ನಿಯಜುದ್ದೀನ್ ಈ ಚಿತ್ರದ ಮೂಲಕ ಶಿವಾಜಿನಗರ ಲಾಲ್ ಅವರನ್ನು ನಾಯಕ ಮಾಡುವುದರ ಜೊತೆಗೆ ಕನ್ನಡ ಭಾಷೆಯ ಬಗ್ಗೆ ಇರುವ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಾಜ್ ಕನ್ನಡ ಚಿತ್ರ ‘ಕತ್ಲೆ ಕಾಡು’ ಸಿನಿಮಾದ ವಿತರಣೆ ಮಾಡಲಿದ್ದಾರೆ.
ಚಿತ್ರಕ್ಕೆ ಯು ಅರ್ಹತಾ ಪತ್ರ ದೊರಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!