ಕಟ್ಲೆ

ಕಟ್ಲೆ ಟ್ರೇಲರ್ ಮತ್ತು ಹಾಡು ಬಿಡುಗಡೆ

ಹಾಸ್ಯ ಕಲಾವಿದ ಕೆಂಪೇಗೌಡ ಮೊದಲಬಾರಿ ನಾಯಕನಾಗಿ ನಟಿಸಿರುವ ’ಕಟ್ಲೆ’ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಸಮಾರಂಭ ಉತ್ಸವ್ ಲೆಗೆಸಿಯ ಕಿಕ್ಕಿರಿದ ಸಭಾಂಗಣದಲ್ಲಿ ನೆಡೆಯಿತು. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್‌ನಾರಯಣ್, ಮಂಡ್ಯ ಶಾಸಕ ರವಿಕುಮಾರ್‌ಗೌಡ(ಗಾಣಿಗ), ಬಿಗ್‌ಬಾಸ್ ಪ್ರಥಮ್, ಕಾಕ್ರೋಚ್ ಸುಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದಕ್ಕೂ ಮುನ್ನ ಕಲಾವಿದರುಗಳು ತಂಡಕ್ಕೆ ಶುಭ ಹಾರೈಸಿದ ತುಣುಕುಗಳು ಬಿತ್ತರಗೊಂಡಿತು.

ಶ್ರೀವಿಧಾ ಅಭಿನಂದನ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸಕೋಟೆ ಮೂಲದ ಭರತ್‌ಗೌಡ ಮಂಚೂಣಿ ರಾಜಕೀಯ ಪಕ್ಷದ ಕಾರ್ಯಕರ್ತ, ಸಮಾಜ ಸೇವಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ.

ಸನ್ಮಿತ ಮತ್ತು ಅಮೃತ ನಾಯಕಿಯರು. ಮತ್ತೋಂದು ಮುಖ್ಯ ಪಾತ್ರದಲ್ಲಿ ಹರ್ಷಿಕಾಪೂರ್ಣಚ್ಚಾ. ಇವರೊಂದಿಗೆ ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್, ಗಣೇಶ್‌ರಾವ್ ಕೇಸರಕರ್,ಪವನ್‌ಕುಮಾರ್, ಬಿರಾದಾರ್, ಎಂ.ಎಸ್.ಉಮೇಶ್,ಯತಿರಾಜ್, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಸಿರ್ಸಿ, ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ವಿ.ನಾಗೇಂದ್ರಪ್ರಸಾದ್, ಭರ್ಜರಿಚೇತನ್‌ಕುಮಾರ್ ಹಾಗೂ ಕಿನ್ನಾಳ್‌ರಾಜ್ ಸಾಹಿತ್ಯದ ಗೀತೆಗಳಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ, ಅಲ್ಟೆಮೇಟ್‌ಶಿವು ಸಾಹಸ, ನೃತ್ಯ ಭಜರಂಗಿಮೋಹನ್ ಅವರದಾಗಿದೆ.

ಕಟ್ಲೆ

ನಂತರ ಮಾತನಾಡಿದ ನಿರ್ದೇಶಕರು, ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥ ಇರುತ್ತದೆ. ನಮ್ಮ ಸಿನಿಮಾಕ್ಕೆ ಅವಧಿ ಎಂದು ಹೇಳಲಾಗಿದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಅದು ಸರಿಯಾಗಿ ಆಗಲಿಲ್ಲ ಅಂದ್ರೆ, ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಪೂರ್ಣ ತಿಳಿಯಲು ನೀವುಗಳು ಟಾಕೀಸ್‌ಗೆ ಬರಬೇಕು. ಕಟ್ಲೆ ಅಳಿಸುತ್ತೆ, ನಗಿಸುತ್ತೆ, ಕಾಡುತ್ತೆ, ಕಾಡಿಸುತ್ತೆ. ಕ್ಲೈಮಾಕ್ಸ್‌ದಲ್ಲಿ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆಂದು ಶ್ರೀವಿಧಾ ಅಭಿನಂದನ್ ಸಣ್ಣದೊಂದು ಮಾಹಿತಿಯನ್ನು ತೆರೆದಿಟ್ಟರು.

ಖುಷಿಯಿಂದ ಮೈಕ್ ತೆಗೆದುಕೊಂಡ ಕೆಂಪೆಗೌಡ, ಹದಿನೆಂಟು ವರ್ಷದ ಸಿನಿಪಯಣದಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಈಗ ಬಡ್ತಿ ಎನ್ನುವಂತೆ ನಾಯಕನಾಗಿ ಅಭಿನಯಿಸಿದ್ದೇನೆ. ನಿರ್ಮಾಪಕರು ಕಾಮಿಡಿ ಕಲಾವಿದನನ್ನು ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹಾರರ್,ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವು ಇದ್ದರೂ ಸಿನಿಮಾವು ಇದಾಗಿರುವುದಿಲ್ಲ. ಫುಲ್ ಮೀಲ್ಸ್‌ನಂತೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೊನೆಯ ದೃಶ್ಯಗಳು ನೋಡುಗರ ಕಣ್ಣನ್ನು ಒದ್ದೆ ಮಾಡಿಸುತ್ತದೆ. ಸಾಹಿತ್ಯ, ಸಂಗೀತ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಮಾಧ್ಯಮದವರು ಕಟ್ಲೆ ಎಲ್ಲರಿಗೂ ತಲುಪುವಂತೆ ಮಾಡಬೇಕೆಂದು ಕೋರಿಕೊಂಡರು.

ಸಚಿತ್ ಫಿಲಂಸ್‌ನ ವೆಂಕಟ್‌ಗೌಡ ಸುಮಾರು 75 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ.

ಕಟ್ಲೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!