ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಪ್ರಯೋಗಾತ್ಮಕ ಚಿತ್ರ ತಯಾರಾಗುತ್ತಿದೆ. ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. 70-80 ಕಾಲಘಟ್ಟದಲ್ಲೇ ತೆರೆ ಕಂಡಿದ್ದ ಕಥಾ ಸಂಗಮ ಹೆಸರಿನಲ್ಲಿಯೇ ಈ ಚಿತ್ರ ಇದೀಗ ಬಿಡುಗಡೆಗೆ ಮುನ್ನುಡಿ ಬರೆದಿದೆ.
ರಿಷಬ್ ಶೆಟ್ಟಿ ಸೇರಿದಂತೆ ಈ ಚಿತ್ರಕ್ಕೆ ಏಳು ಜನ ನಿರ್ದೇಶಕರು ಎನ್ನುವುದು ಮತ್ತೊಂದು ವಿಶೇಷ.70-80 ಕಾಲಘಟ್ಟದಲ್ಲೇ ತೆರೆಗೆ ಬಂದಿದ್ದ ಕಥಾ ಸಂಗಮ ಹೆಸರಿನಲ್ಲಿಯೇ ಇದೀಗ ಮತ್ತೊಂದು ಸಿನಿಮಾ ತೆರೆ ಅಪ್ಪಳಿಸಲು ಬರುತ್ತಿದೆ.ಶೆಟ್ಟರ ಈ ಕಥಾ ಸಂಗಮ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು ನವೆಂಬರ್ ಕೊನೆ ವಾರದಲ್ಲಿ ಚಿತ್ರ ತೆರೆ ಕಾಣಲಿದೆ.
ಸುದ್ದಿಗೋಷ್ಟಿಯಲ್ಲಿ ಚಿತ್ರ ತಂಡ ಈ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇಂತಹ ಸಾಹಸವನ್ನು 70-80 ಕಾಲಘಟ್ಟದಲ್ಲೇ ಮಾಡಿದ್ದರು.ಕಣಗಾಲ್ ಹಾದಿಯಲ್ಲಿ ಸಾಗುತ್ತಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ, ಅಂತಹುದೇ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಾಜ್ ಬಿ ಶೆಟ್ಟಿ, ಟಿ ಹರಿಪ್ರಿಯಾ, ಏಳು ಜನ ನಿರ್ದೇಶಕರು ಹಾಗೂ ನಿರ್ಮಾಪಕರು ಹಾಜರಿದ್ದರು.ಇನ್ನು, ಈ ಚಿತ್ರದ ಮೂಲಕ ಕರಣ್ ಅನಂತ್, ಸುಮಂತ್ ಭಟ್, ರಾಹುಲ್ ಪಿ.ಕೆ, ಶಶಿಕುಮಾರ್. ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.ನಟಿ ಹರಿಪ್ರಿಯಾ ಕೂಡ ಮೊದಲ ಬಾರಿಗೆ ಡೈಲಾಗ್ ಇಲ್ಲದೆ ಅಭಿನಯಿಸಿದ್ದಾರಂತೆ.ಮುಖ್ಯವಾಗಿ ರಿಷಬ್ ಶೆಟ್ಟಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮತ್ತೊಂದು ವಿಶೇಷವಂತೆ.
Be the first to comment