ಜಿ ಕೆ ಎಂಟರ್ಟೈನ್ಮೆಂಟ್ ಸಂಸ್ಥೆಯಿಂದ ಲಂಡನ್ ನ ಸಾಗರೋತ್ತರ ಕನ್ನಡಿಗ ಗೋಪಾಲ ಕುಲಕರ್ಣಿ ಲಂಡನ್ ಅವರು ನಟಿಸಿ, ನಿರ್ಮಿಸಿರುವ “ಕಥಾ ಲೇಖನ ” ಸಿನಿಮಾದ ಮೊದಲ ರೋಮ್ಯಾಂಟಿಕ್ ಹಾಡು “ದಿನಾ ದಿನಾ ಅನುದಿನ” ನ.25ರಂದು ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ.
ರಾಜೇಶ್ ಕೃಷ್ಣನ್ ಹಾಗೂ ಅನುರಾಧ ಭಟ್ ಅವರ ಧ್ವನಿಯಲ್ಲಿ ಚಿತ್ರಗೀತೆ ಮೂಡಿ ಬಂದಿದೆ. ಯುವ ನಿರ್ದೇಶಕ ಸಿ ಜಿ ಸತ್ಯರತ್ನಮ್ (ಗೌರಿಬಿದನೂರು) ಅವರು ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ. ಈ ಹಾಡಿನ ಗೀತರಚನೆ ಸತ್ಯರತ್ನಮ್ (ಗೌರಿಬಿದನೂರು) ಅವರದ್ದು ಆಗಿದೆ. ಚಿತ್ರಕ್ಕೆ ಸಂಗೀತವನ್ನು ಕರಣಂ ಅವರು ನೀಡಿದ್ದಾರೆ.
ಚಿತ್ರಕ್ಕೆ ಛಾಯಾಗ್ರಹಣ ಸಾಮ್ (ರಂಗ ಸ್ವಾಮಿ), ಸಂಕಲನ ಶ್ರೀ ವರ್ಕಲ ಅವರದ್ದು ಆಗಿದೆ. ಚಿತ್ರದ ತಾರಾಗಣದಲ್ಲಿ ಅರ್ಫಾತ್, ಕಾವ್ಯ ಗೌಡ, ಗೋಪಾಲ್ ಕುಲಕರ್ಣಿ, ಚಂದ್ರಪ್ರಭಾ, ನಾಗೇಂದ್ರ ಅರಸ್, ಮಂಜು ಪಾವಗಡ, ಜಗ್ಗಪ್ಪ, ಪಲ್ಟಿ ಗೋವಿಂದ್, ವಿನಯ್, ಸಂತು, ಕುಮಾರ್, ಸ್ವಪ್ನ ರಾಜ್ ಇತರರು ನಟಿಸಿದ್ದಾರೆ.
“ಕಥಾ ಲೇಖನ ” ಸಿನಿಮಾದ ರೋಮ್ಯಾಂಟಿಕ್ ಹಾಡು ಬಿಡುಗಡೆಗೆ ಸಿನಿಪ್ರಿಯರು ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ.
___






Be the first to comment