‘ಕಥಾ ಸಂಗಮ’ಚಿತ್ರದ ಟ್ರೈಲರ್‌ ಬಿಡುಗಡೆ

ಏಳು ಕಥೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರ ಸಂಗಮದಲ್ಲಿ ಒಂದು ಸಿನಿಮಾ… ಅದುವೇ ‘ಕಥಾ ಸಂಗಮ’. ಪ್ರೇಮ ಕಥೆ, ಥ್ರಿಲ್ಲರ್‌, ಕ್ರೈಂ, ಸಸ್ಪೆನ್ಸ್‌… ಹೀಗೆ ಒಂದೊಂದು ಕಥೆಗಳು ಒಂದೊಂದು ಸಿನಿಮಾ ನೋಡಿದ ಅನುಭವ ನೀಡಲಿವೆ ಎನ್ನುವುದಕ್ಕೆ ‘ಕಥಾ ಸಂಗಮ’ ಚಿತ್ರದ ಟ್ರೈಲರ್‌ ಸಾಕ್ಷಿಯಂತಿದೆ.

ಪುಟ್ಟಣ್ಣ ಕಣಗಾಲ್‌ ಅವರು 70ರ ದಶಕದಲ್ಲಿ ನಾಲ್ಕು ಕಥೆಗಳ ‘ಕಥಾ ಸಂಗಮ’ ಸಿನಿಮಾ ನಿದೇಶಿಸಿ ದಾಖಲೆ ನಿರ್ಮಿಸಿದ್ದರು. ಈಗ ಅದರ ಮುಂದುವರಿದ ಭಾಗದಂತೆ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ ಕಲ್ಪನೆಯಲ್ಲಿ ‘ಕಥಾಸಂಗಮ’ ಮುಂದುವರಿದ ಭಾಗದಂತೆ ಮೂಡಿಬಂದಿದೆ. ಈ ತಿಂಗಳ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ಟ್ರೈಲರ್‌ ಅನ್ನು ಪುಟ್ಟಣ್ಣ ಕಣಗಾಲ್‌ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಿಸಿದರು. ‘ರಿಷಬ್‌ ಶೆಟ್ಟಿ ನೇತೃತ್ವದ ತಂಡದಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಕನ್ನಡಚಿತ್ರರಂಗದಲ್ಲಿ ಬರಲಿ’ ಎಂದು ಆಶಿಸಿದರು.

ಈ ಚಿತ್ರದ ಟ್ರೈಲರ್‌ ಬಿಡುಗಡೆಯಾದ ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 17 ಸಾವಿರ ಮಂದಿ ಇಷ್ಟಪಟ್ಟಿದ್ದಾರೆ.

ಪುಟ್ಟಣ್ಣ ಕಣಗಾಲ್‌ ಆರಂಭಿಸಿದ ಜಾನರ್‌ನಲ್ಲೇ ಸಾಗುವ ಈ ‘ಕಥಾ ಸಂಗಮ’ದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಭಾಗ, ಮೈಸೂರು ಹಾಗೂ ಮಂಗಳೂರು ಭಾಗದ ಸೊಗಡಿನ ಸಂಭಾಷಣೆ ಇರಲಿದೆ. ಈ ಚಿತ್ರ ನಿರ್ಮಾಣಕ್ಕೆ ರಿಷಬ್‌ ಅವರ ಜತೆಗೆ ನಿರ್ಮಾಪಕರಾದ ಎಚ್‌.ಕೆ.ಪ್ರಕಾಶ್‌, ಪ್ರದೀಪ್‌ ಎನ್‌.ಆರ್‌. ಕೈಜೋಡಿಸಿದ್ದಾರೆ. ರಿಷಬ್‌ ಪರಿಕಲ್ಪನೆಯಲ್ಲಿ ನಿರ್ದೇಶಕರಾದ ಕಿರಣ್‌ರಾಜ್‌ ಕೆ., ಶಶಿಕುಮಾರ್‌ ಪಿ., ಚಂದ್ರಜಿತ್‌ ಎಲ್ಲಿಯಪ್ಪ, ರಾಹುಲ್‌ ಪಿ.ಕೆ., ಜೈಶಂಕರ್‌ ಎ., ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ನಿರ್ದೇಶಿಸಿದ್ದಾರೆ. ನೊಬಿಲ್‌ ಪಾಲ್‌ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ರಿಷಬ್‌ ಶೆಟ್ಟಿ, ಹರಿಪ್ರಿಯಾ, ಕಿಶೋರ್‌ ಕುಮಾರ್‌, ರಾಜ್‌ ಬಿ. ಶೆಟ್ಟಿ, ಯಜ್ಞಾಶೆಟ್ಟಿ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಸೌಮ್ಯ, ಬಾಲಾಜಿ ಮನೋಹರ್‌ ಇದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!