ಭಿನ್ನ ಚಿತ್ರ “ಕಸ್ತೂರಿ ಮಹಲ್”

ದಿನೇಶ್ ಬಾಬು ನಿರ್ದೇಶದನ 50ನೇ ಸಿನಿಮಾ ‘ಕಸ್ತೂರಿ ಮಹಲ್’ ಬಿಡುಗಡೆಗೆ ಸಿದ್ಧಗೊಂಡಿದೆ. ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿರುವ ಈ ಸಿನಿಮಾ ಮೇ 13ರಂದು ರಿಲೀಸ್ ಆಗಲಿದೆ.

ನಟಿ ಶಾನ್ವಿ ಹೇಳುವಂತೆ ‘ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ ಚಿತ್ರ. ಚಿತ್ರೀಕರಣ ನಡೆದ ಕೊಟ್ಟಿಗೆಹಾರದ ಪರಿಸರ ಅದ್ಭುತವಾಗಿತ್ತು. ನನಗೆ ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ಬಗ್ಗೆ, ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರವೊಂದು ರಿಲೀಸ್ ಆಗುತ್ತಿದೆ”.

ರಂಗಾಯಣ ರಘು ಅವರು ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಸ್ಕಂದ ಅಶೋಕ್ ಸಹ ನಟಿಸಿದ್ದಾರೆ.

ನಿರ್ಮಾಪಕ ರವೀಶ್ ‘ದಿನೇಶ್ ಬಾಬು ಅವರ ಬಳಿ ಹಾರರ್ ಸಿನಿಮಾ ಮಾಡೋಣ ಎಂದು ಹೇಳಿದ್ದೆ. ಉತ್ತಮ ಕಥೆ ಸಿದ್ದ ಮಾಡಿಕೊಂಡು ಸಿನಿಮಾ ಶುರು ಮಾಡಿದರು.ಮೇ 13ರಂದು ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಹೇಳಿದ್ದಾರೆ.

ಬಿಗ್‌ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವತ್ಥ್‌ ಮುಂತಾದವರು ನಟಿಸಿದ್ದಾರೆ. ಹಿನ್ನೆಲೆ ಸಂಗೀತ ರಮೇಶ್ ಕೃಷ್ಣ ಅವರದ್ದು ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!