ಕಾಶ್ಮೀರ ಸುತ್ತಿಬಂದ ‘ಆರ್ಟಿಕಲ್  370’

ಹಿರಿಯನಟ ಶಶಿಕುಮಾರ್ ಒಬ್ಬ ಮಿಲಿಟರಿ ಆಫೀಸರ್ ಆಗಿ ಕಾಣಿಸಿಕೊಂಡಿರುವ, ಕೆ .ಶಂಕರ್ ಅವರ ನಿರ್ದೇಶನದ, ದೇಶಪ್ರೇಮದ ಕಥೆ ಹೊಂದಿದ ಚಿತ್ರ ಆರ್ಟಿಕಲ್ 370.

ಈ ಚಿತ್ರದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಕಾಶ್ಮೀರಕ್ಕೆ ತೆರಳಿದ್ದ ಚಿತ್ರತಂಡ ಅಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿದಿದೆ. ಪಾಕಿಸ್ತಾನಿ ಪ್ರೇರಿತ ಉಗ್ರವಾದಿಗಳು ಭಾರತದ ಗಡಿಯಲ್ಲಿನ ಕಾಶ್ಮೀರಕ್ಕೆ ನುಸುಳುವ ಹಾಗೂ ಉಗ್ರಗಾಮಿಗಳ ವಿರುದ್ಧ ಭಾರತೀಯ ಸೈನಿಕರ ಕಾರ್ಯಚರಣೆ ನಡೆಸುವ ದೃಶ್ಯಗಳು ಮತ್ತು ಪ್ರತ್ಯೇಕತಾವಾದಿಗಳಿಂದ ಹಲವು ವರ್ಷಗಳ ಹಿಂದೆ ಕಿರುಕುಳ ಅನುಭವಿಸಿ ಗುಳೆಹೋಗಿದ್ದ ಕಾಶ್ಮೀರಿ ಪಂಡಿತರು ಆರ್ಟಿಕಲ್ 370 ರದ್ದಾದ ನಂತರ ಮತ್ತೆ ಕಾಶ್ಮೀರಕ್ಕೆ ಮರಳಿ ಬಂದಾಗ, ಆ ಪಂಡಿತರನ್ನು ನೋಡಿದ ಸ್ಥಳೀಯ ಕಾಶ್ಮೀರಿಗರ ಪ್ರತಿಕ್ರಿಯೆ ಹೇಗಿತ್ತು,ಹೀಗೆ ಅನೇಕ ದೃಶ್ಯಗಳನ್ನು ಸುಮಾರು ಹತ್ತು ದಿನಗಳು ಕಾಶ್ಮೀರದ ಗುಲ್‌ಮಾರ್ಗ್, ದಾಲ್ಲೇಕ್, ಮೊಘಲ್ ಪಾರ್ಕ್, ಪಲ್ಗಾವ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಈಗಾಗಲೇ ಮಡಿಕೇರಿ, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಶ್ರವಣಬೆಳಗೊಳದಲ್ಲಿ ಚಿತ್ರೀಕರಣ ಮುಗಿದಿದೆ. ಆರ್ಟಿಕಲ್ ೩೭೦ ಚಿತ್ರದಲ್ಲಿ ಕೇವಲ ೨ ಹಾಡುಗಳಿದ್ದು, ಯುಗಂತ್ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ರವಿ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ.

ಲೈರಾ ಎಂಟರ್‌ಟೈನ್ಮೆಂಟ್ ಅಂಡ್  ಮೀಡಿಯಾ ಮೂಲಕ ನಿರ್ದೇಶಕರ ಸ್ನೇಹಿತರೂ ಆದ ಭರತ್‌ಗೌಡ
ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಕೆ.ಶಂಕರ್ ಅವರೇ ರಚಿಸಿದ್ದಾರೆ. ಉಳಿದಂತೆ ಸಂಜೀವರೆಡ್ಡಿ ಅವರ ಸಂಕಲನ, ವೇಲು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇನ್ನು ಈ ಚಿತ್ರದಲ್ಲಿ ಹಿರಿಯನಟ
ಶಿವರಾಮಣ್ಣ ನಾಯಕನ ತಂದೆಯಾಗಿ, ಹಿರಿಯನಟಿ ಶೃತಿ  ಪತ್ನಿಯಾಗಿಯೂ ನಟಿಸಿದರೆ,  ದೊಡ್ಡ ರಂಗೇಗೌಡ್ರು, eಗಣೇಶ್‌ರಾವ್ ಕೇಸರಕರ್, ರಮಾನಂದ್, ವೆಂಕಟೇಶ್,  ಕಿಲ್ಲರ್ ವೆಂಕಟೇಶ್, ಅವಿನಾಶ್, ರಘುರಂಜನ್ ಚಿತ್ರದ ಉಳಿದ  ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!