karthik: ಕಾರ್ತಿಕ್ ಜಯರಾಮ್ ರಿಲೇಷನ್‌ ಶಿಪ್‌ ದೃಢಪಡಿಸಿದ ಫೋಟೋಗಳು!

ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರ್ತಿಕ್ ಜಯರಾಮ್ ಅವರು ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಅವರ ಜೊತೆ ರಿಲೇಶನ್ ಷಿಪ್ ನಲ್ಲಿ ಇರುವ ಫೋಟೋ ಬಹಿರಂಗ ಆಗಿದೆ.

ಕಾರ್ತಿಕ್ ಜಯರಾಮ್ ಅವರು ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಅವರ ಜೊತೆ ರಿಲೇಶನ್ ಷಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದರೂ ಈ ಜೋಡಿ ಅದನ್ನು ನಿರಾಕರಿಸುತ್ತಲೇ ಇದ್ದರು. ಮೇ 1ರಂದು ಕಾರ್ತಿಕ್ ಜಯರಾಮ್ ಅವರ ಜನ್ಮದಿನದಂದು ಅಪರ್ಣಾ ಇಬ್ಬರೂ ಇರುವ ಫೋಟೋವನ್ನು ಪೋಸ್ಟ್ ಮಾಡಿ ಸಂಬಂಧ ದೃಢ ಪಡಿಸಿದ್ದಾರೆ.

ಕಾರ್ತಿಕ್ ಜಯರಾಮ್ ಹುಟ್ಟುಹಬ್ಬದ ದಿನ ಅಪರ್ಣಾ ಇಬ್ಬರೂ ಇರುವ ಫೋಟೋವನ್ನು ಪೋಸ್ಟ್ ಮಾಡಿ ನನ್ನ ಜೀವನದ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪ್ರೀತಿಯ ಗೆಳಯನಾಗಿ, ಸ್ನೇಹಿತನಾಗಿ ನನ್ನ ಜೀವನವಿಡೀ ನಿಂತಿರುವುದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಫ್ಯಾಶನ್ ಶೋವೊಂದರಲ್ಲಿ ಭೇಟಿಯಾದ ಇಬ್ಬರೂ ಸ್ನೇಹಿತರಾಗಿ ನಂತರ ಅದು ಈಗ ಪ್ರೀತಿಗೆ ತಿರುಗಿದೆ. ಕಾರ್ತಿಕ್ ಜಯರಾಮ್ ಹಿಂದಿ ಮತ್ತು ಕನ್ನಡ ಕಿರುತೆರೆಯ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!