ಧನಂಜಯ ಅತ್ರೆ, ಅನುಷ್ಕಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕರ್ಷಣಂ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥಿಯೇಟರ್‍ನಲ್ಲಿ ನೆರವೇರಿತು. ಕನ್ನಡದ ಹಿರಿಯ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್ ಹಾಗೂ ನಟ ಶ್ರೀನಿವಾಸ ಮೂರ್ತಿ ಈ ಚಿತ್ರದ ಆಡಿಯೋ ಸಿ.ಡಿ. ರಿಲೀಸ್ ಮಾಡಿದರು. ಈವರೆಗೆ ಗಾಯಕರಾಗಿ ಗುರುತಿಸಿಕೊಂಡಿದ್ದ ಹೇಮಂತ್ ಸುಬ್ರಹಣ್ಯ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಶರವಣ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗೌರಿ ಅತ್ರೆ ಕಥಾ ಹಂದರ ಹೆಣೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಕ್‍ಲೈನ್ ವೆಂಕಟೇಶ್ ನಾಯಕ ನಟರಾದ ಧನಂಜಯ್ ನನಗೆ 11 ವರ್ಷಗಳಿಂದ ಪರಿಚಯ ಆಗ ಸೀರಿಯಲ್‍ಗಳಲ್ಲಿ ಆಕ್ಟ್ ಮಾಡುತ್ತಿದ್ದರು. ಅಕ್ಟಿಂಗ್ ಕೇಳಿಕೊಂಡು ಬಂದಿದ್ದರು. ನಾನು ಕೂಡ ಹಿಂದೆ ಸುಮಾರು ನಿರ್ದೇಶಕರುಗಳ ಬಳಿ ಹೋಗಿ ಕೇಳುತ್ತಿದ್ದೆ ಈಗ 5 ವರ್ಷಗಳಾದ ಮೇಲೆ ನನ್ನ ಬಳಿ ಬಂದು ಸಿನಿಮಾ ಮಾಡಿದ್ದೇನೆ ಎಂದರು ಅದೇ ಕರ್ಷಣಂ ಇವರು ಇನ್ನು ಹೆಚ್ಚು ಸಿನಿಮಾಗಳನ್ನು ಮಾಡುವಂತಾಗಲಿ, ಶ್ರೀನಿವಾಸಮೂರ್ತಿ ಒಂದು ತೂಕವಿರುವ ಪಾತ್ರವನ್ನೇ ಮಾಡುತ್ತಿರುತ್ತಾರೆ. ಹೇಮಂತ್ ನನ್ನ ಪ್ರೀತ್ಸೆ ಚಿತ್ರದಲ್ಲಿ ಹಾಡಿದ್ದರು. ಈಗ ಸಂಗೀತ ನಿರ್ದೇಶಕರಾಗಿದ್ದಾರೆ. ನನ್ನ ಎಲ್ಲಾ ಸಿನಿಮಾಗಳಲ್ಲಿ ಫೇವರೇಟ್ ಎಂದರೆ ಪ್ರೀತ್ಸೆ, ಪ್ರೇತ್ಸೆ ಹಾಡು ಎಂದರು. ನಂತರ ನಾಯಕ ಹಾಗೂ ನಿರ್ಮಾಪಕ ಧನಂಜಯ ಅತ್ರೆ ಮಾತನಾಡಿ ಆರಂಭದಲ್ಲಿ ನಾನು ಮಾಡೆಲಿಂಗ್ ಮಾಡುತ್ತಿದ್ದೆ. ನಂತರ ಕಿರುತೆರೆಯ ಹಲವಾರು ಸೀರಿಯಲ್‍ಗಳಲ್ಲಿ ಅಭಿನಯಿಸಿದ್ದು ಈಗ ನಾಯಕನಾಗಿದ್ದೇನೆ ಎಂದು ಹೇಳಿದರು. ಹಿಂದೆ ನಾನು 2005 ರಲ್ಲಿ ‘ಬುದ್ಧಿವಂತ’ ಚಿತ್ರದ ಮೂಲಕ ಬಣ್ಣ ಹಚ್ಚಿದ್ದೆ ನಂತರ ರಾಕ್‍ಲೈನ್ ವೆಂಕಟೇಶ್ ಅವರ 3 ಚಿತ್ರಗಳಲ್ಲಿ ಅಲ್ಲದೆ ಮುಂಜಾವು, ಭರಣಿ ಹಾಗೂ ಚಿತ್ರಲೇಖ ಧಾರವಾಹಿ 30 ಎಪಿಸೋಡ್‍ಗಳಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರಕ್ಕೆ ಕೈ ಹಾಕಿದ್ದೇನೆ. ‘ಕರ್ಷಣಂ’ ಹಳ್ಳಿಗನ್ನಡದ ಪದ ಸೆಳೆತ ಎಂಬ ಅರ್ಥವನ್ನು ಕೊಡುತ್ತದೆ. ಒಬ್ಬ ಸ್ಲಂ ಹುಡುಗನ ಕಥೆ ಇದು. ತಂದೆ ಮಗನ ನಡುವಿನ ಸಂಬಂಧದ ಮೇಲೆ ಕಥೆ ಸಾಗುತ್ತದೆ. ಶ್ರೀನಿವಾಸ್‍ಮೂರ್ತಿ ಅವರ ಜೊತೆ ಕೆಲಸ ಮಾಡಿದ್ದು ನನಗೆ ದೊಡ್ಡ ಅನುಭವ ಶಂಕ್ರಣ್ಣನ ಅಭಿಮಾನಿಯಾಗಿ ನಾನೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶರವಣ ಮಾತನಾಡುತ್ತ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ನಮ್ಮ ಗುರಿಯ ಸಾಧನೆಗೆ ಇನ್ನೊಬ್ಬರನ್ನು ತುಳಿದುಕೊಂಡು ಹೋಗಬಾರದು. ಅದರಿಂದ ನಾವು ಪಡೆದುಕೊಳ್ಳುವುದಕ್ಕಿಂತ ಅವರು ಕಳೆದುಕೊಳ್ಳುವುದೇ ಹೆಚ್ಚು. ಅದನ್ನೇ ಒಂದು ಥ್ರಿಲ್ಲರ್ ಕಥೆಯ ಮೂಲಕ ಹೇಳಿದ್ದೇವೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಹೇಮಂತ್ ಮಾತನಾಡುತ್ತ ನಾನಿಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ರಾಕ್‍ಲೈನ್ ವೆಂಕಟೇಶ್‍ರವರೇ ಕಾರಣ. ‘ನನ್ನನ್ನು ಪ್ರೀತ್ಸೆ’ ಹಾಡಿನ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟರು. ಈಗ ನನ್ನ ಸಂಗೀತದ ಹಾಡುಗಳನ್ನೂ ಕೂಡ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಅವರದು ಲಕ್ಕಿ ಹ್ಯಾಂಡ್ ಎಂದು ಹೇಳಿದರು. ಈ ಚಿತ್ರದ ನಾಯಕಿಯಾಗಿ ಅನುಷ್ಕಾರೈ ಅಭಿನಯಿಸಿದ್ದು ತನ್ನ ಪಾತ್ರದ ಬಗ್ಗೆ ಮಾತನಾಡಿದ ಅವರು ಮಹಾನುಭವರು ಹಾಗೂ ಪ್ರಾರ್ಥನಾ ಚಿತ್ರಗಳ ನಂತರ ಇದು ನನ್ನ ಮೂರನೇ ಚಿತ್ರ. ಒಬ್ಬ ಜರ್ನಲಿಸ್ಟ್ ಆಗಿ ನಾನೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ತುಂಬ ತೂಕ ಇರುವ ಪಾತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ 4 ಹಾಡುಗಳಿದ್ದು ನಾಗೇಂದ್ರ ಪ್ರಸಾದ್ ಹಾಗೂ ಮನು ಸಾಹಿತ್ಯ ರಚಿಸಿದ್ದಾರೆ. ಹೇಮಂತ್ ಅನುರಾಧಾ ಭಟ್, ಶಶಾಂಕ್ ಶೇಷಗಿರಿ ಹಾಡುಗಳಿಗೆ ದನಿಯಾಗಿದ್ದಾರೆ. ಮೋಹನ್ ಎಂ ಮುಗುಡೇಶ್ವರನ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
Be the first to comment